
ಮೈಸೂರು
ದೇಶದ ಜನತೆಗೆ ಪಂಜಾಬ್ ಸರ್ಕಾರದಿಂದ ಅವಮಾನ’ :ಹೇಮಂತ್ ಕುಮಾರ್ ಗೌಡ
ಮೈಸೂರು,ಜ.7:- ಪಂಜಾಬ್ ಸರ್ಕಾರ ಪ್ರಧಾನಮಂತ್ರಿ ಅವರಿಗೆ ಸೂಕ್ತ ಭದ್ರತೆ ನೀಡದೆ ದೇಶದ ಜನತೆಯನ್ನು ಅವಮಾನಿಸಿದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಆರೋಪಿಸಿದರು.
ಮಾಧ್ಯಮ ಹೇಳಿಕೆ ನೀಡಿದ ಅವರು ಪಂಜಾಬ್ ನಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ದೇಶವೇ ತಲೆ ತಗ್ಗಿಸುವಂತೆ ಮಾಡಿದೆ ಎಂದರು.
ನಾನು ಬದುಕಿ ಬಂದೆ ಎಂದು ದೇಶದ ಪ್ರಧಾನಮಂತ್ರಿಗಳು ಆತಂಕದಿಂದ ಹೇಳಿದ್ದಾರೆ ಎಂದರೆ ಕಾಂಗ್ರೆಸ್ ಸರ್ಕಾರ ಎಷ್ಟರ ಮಟ್ಟಿಗೆ ಅವರನ್ನು ನಡೆಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. ಪ್ರಧಾನ ಮಂತ್ರಿಗಳಿಗೆ ಭದ್ರತೆ ನೀಡದ ಕಾಂಗ್ರೆಸ್ ಸರ್ಕಾರದ ನಡೆಯನ್ನು ಪಕ್ಷ ಖಂಡಿಸುತ್ತದೆ ಎಂದರು. (ಜಿ.ಕೆ,ಎಸ್.ಎಚ್)