ಕರ್ನಾಟಕಪ್ರಮುಖ ಸುದ್ದಿ

ಕೆಜಿಎಫ್‍ನ ರಸ್ತೆ ಪಕ್ಕದಲ್ಲೇ 50 ಅಡಿಯಷ್ಟು ಕುಸಿದ ಭೂಮಿ : ಜನರಲ್ಲಿ ಆತಂಕ

ರಾಜ್ಯ (ಪ್ರಮುಖ ಸುದ್ದಿ) ಕೆಜಿಎಫ್‍, ಮೇ 8 : ಕಳೆದ ರಾತ್ರಿ ಸುರಿದ ಮಳೆ ಹಿನ್ನಲೆಯಲ್ಲಿ ಕೆಜಿಎಫ್‍ನಲ್ಲಿ ಸುಮಾರು 50 ಅಡಿ ಭೂಮಿ ಕುಸಿದು ಜನರಲ್ಲಿ ಆತಂಕ ಸೃಷ್ಟಿಸಿತು.

ಕೋಲಾರ ಜಿಲ್ಲೆಯ ಚಿನ್ನದ ಗಣಿ ಪ್ರದೇಶ ಕೆಜಿಎಫ್‍ನ ಮಂಜುನಾಥ್ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಕೆಜಿಎಫ್‍ನಲ್ಲಿ ಆಗಿದ್ದಾಗ್ಗೆ ಭೂ ಕುಸಿತ ಸಾಮಾನ್ಯವಾಗಿದೆ. ಆದರೂ ಇದೀಗ ರಸ್ತೆ ಪಕ್ಕದಲ್ಲೇ ಸುಮಾರು 50 ಅಡಿಯಷ್ಟು ಭೂಮಿ ಕುಸಿದ ಪರಿಣಾಮ ಜನರು ಭಯಗೊಂಡಿದ್ದಾರೆ.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿದ್ದು ಪರಿಹಾರ ಹುಡುಕುವಲ್ಲಿ ನಿರತರಾಗಿದ್ದಾರೆ.

ವರದಿ: ಎಸ್.ಎನ್/ಎನ್.ಬಿ.ಎನ್

Leave a Reply

comments

Related Articles

error: