ಮೈಸೂರು

‘ಶಾಶ್ವತ ಸಾವಿನ ಲಹರಿ ಹುಡುಕುತ್ತಾ’ ಕೃತಿ ಬಿಡುಗಡೆ

ಮೈಸೂರು,ಜ.10:- ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಅವರ ಎರಡನೇ ಅನುವಾದಿತ ಕೃತಿ ‘ಶಾಶ್ವತ ಸಾವಿನ ಲಹರಿ ಹುಡುಕುತ್ತಾ’ ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಂಡಿತು.

ಕೃತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಮತ್ತು ಕಲಾ ವಿಭಾಗದ ಡೀನ್ ಮುಜಾಫರ್ ಅಸ್ಸಾದಿಯವರು ಬಿಡುಗಡೆ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ವೆಂಕಟೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಶಿವಕುಮಾರಸ್ವಾಮಿ, ಮಾಧ್ಯಮ ವಿಶ್ಲೇಷಕ ಅಮ್ಮಸಂದ್ರ ಸುರೇಶ್ ಮತ್ತು ಲೇಖಕಕರು ಉಪಸ್ಥಿತರಿದ್ದರು. ಈ ಕೃತಿಯು ಬೇರೆ ಸಂಸ್ಕೃತಿಗಳಲ್ಲಿ (ಬೇರೆ ದೇಶಗಳಲ್ಲಿ)ಇರುವ ಅಂತ್ಯಸಂಸ್ಕಾರದ ಪದ್ಧತಿಗಳ ಕುರಿತು ವಿವರಣೆ ನೀಡುತ್ತದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: