
ಮೈಸೂರು
ಇಂದಿನಿಂದ ಬೂಸ್ಟರ್ ಡೋಸ್ : ಇನ್ನೂ ಲಸಿಕೆ ಪಡೆಯದವರು ದಯವಿಟ್ಟು ಪಡೆದುಕೊಳ್ಳಿ ; ಡಾ.ಬಗಾದಿ ಗೌತಮ್
ಮೈಸೂರು,ಜ.10:- ಮೈಸೂರಿನಲ್ಲಿಯೂ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಮೂರನೆ ಅಲೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಯ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ತಮ್ಮ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು 1027 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ. 125 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಹೋಂ ಐಸೋಲೇಷನ್ ನಲ್ಲಿದ್ದಾರೆ. ನಿನ್ನೆ ಬಂದಿರುವ ಕೊರೋನಾ ಪರೀಕ್ಷೆಯ ವರದಿ ಪ್ರಕಾರ 5.62% ಪಾಸಿಟಿವ್ ಇದೆ. ಆದರೆ ಒಂದು ವಾರದ ಡಾಟಾ ತಗೊಂಡರೆ ಜಿಲ್ಲೆಯಲ್ಲಿ 42584 ಟೆಸ್ಟ್ ಆಗಿದೆ. ಅದರಲ್ಲಿ 1064 ಪಾಸಿಟಿವ್ ಪ್ರಕರಣ ಬಂದಿದೆ. ಅಂದರೆ 2.5% ಪಾಸಿಟಿವಿಟಿ ಇದೆ. ಕಳೆದೊಂದು ವಾರದ ಡಾಟಾ ತಗೊಂಡರೆ 2.5% ಇದೆ. ನಿನ್ನೆಯದು ಮಾತ್ರ ತಗೊಂಡರೆ 5.62%. ಈ ಪಾಸಿಟಿವಿಟಿ ದರ ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳಲ್ಲಿ ಮೈಸೂರು ತಾಲೂಕಿನಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಈವರೆಗೆ ಬಂದಿರುವ ಸಕ್ರಿಯ ಪ್ರಕರಣಗಳಲ್ಲಿ 775ಪ್ರಕರಣಗಳು ಮೈಸೂರು ತಾಲೂಕಿನಲ್ಲಿಯೇ ಇದೆ. ಮೈಸೂರು ನಗರ ಮತ್ತು ಮೈಸೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಇದೆ.80% ಕೇಸಸ್ ಮೈಸೂರು ತಾಲೂಕು ಮತ್ತು ನಗರದ್ದು ಎಂದರು.
ಮೊದಲ ಕೊರೊನಾ ಡೋಸ್ ಪಡೆದಿರುವವರ ಪ್ರಮಾಣ ಶೇಕಡಾ 96.5% ರಷ್ಟಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ ಶೇಕಡಾ 82% ರಷ್ಟಿದೆ. ಜಿಲ್ಲೆಯಲ್ಲಿ ಒಂದೂ ಡೋಸ್ ಪಡೆಯದ 90 ಸಾವಿರ ಮಂದಿ ಬಾಕಿ ಇದ್ದಾರೆ. ಇವರು ಕೊರೋನಾಗೆ ತುತ್ತಾಗೋದು ಶೇಕಡಾ 10 ಪಟ್ಟು ಹೆಚ್ಚಿದೆ. ದಯವಿಟ್ಟು ಒಂದೂ ಡೋಸ್ ಕೂಡ ಹಾಕಿಸಿಕೊಳ್ಳದವರು ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.
ಬೂಸ್ಟರ್ ಡೋಸ್ ಪಡೆಯುವವರು 4.7ಲಕ್ಷ ಡೋಸ್ ಬಾಕಿ ಇದ್ದು ಇದು ಬೂಸ್ಟರ್ ಡೋಸಸ್ ಇವತ್ತಿನಿಂದ ಆರಂಭವಾಗಿದೆ. ಒಂದು ಡೋಸ್ ಲಸಿಕೆ ಕೂಡ ತಗೊಳ್ಳದವರಿಗೆ ಹತ್ತುಪಟ್ಟು ಕೋವಿಡ್ ಬರುವ ಸಾಧ್ಯತೆ ಇದೆ. ಅವರು 30ಪಟ್ಟು ಆಕ್ಸಿಜನ್ ಬೆಡ್ ಗೆ ದಾಖಲಾಗುವ ಸಾಧ್ಯೆ ಇದೆ. ಒಂದೂ ಲಸಿಕೆ ಪಡೆಯದವರಲ್ಲಿ ರಿಸ್ಕ್ ಜಾಸ್ತಿ ಎಂದರು.
ಜಿಲ್ಲೆಯಲ್ಲಿ 14ಸರ್ಕಾರಿ ಆಸ್ಪತ್ರೆಗಳಲ್ಲಿ 2048 , 44ಖಾಸಗಿ ಆಸ್ಪತ್ರೆಗಳಲ್ಲಿ 1661, 21ಕೋವಿಡ್ ಕೇರ್ ಸೆಂಟರ್ ಗಳಲ್ಲಿ 2671ಬೆಡ್ಸ್ ಸೇರಿದಂತೆ ಒಟ್ಟು 6380 ಹಾಸಿಗೆಗಳನ್ನು ವ್ಯವಸ್ಥೆ ಮಾಡಿದ್ದೇವೆ. ಇನ್ನೂ ಅವಶ್ಯಕತೆ ಬಂದಲ್ಲಿ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. 17 ಆಕ್ಸಿಜನ್ ಪ್ಲಾಂಟ್ ಗಳಲ್ಲಿ 12 ಈಗಾಗಲೇ ಕಾರ್ಯ ಕೈಗೊಂಡಿದೆ. ಇನ್ನು 5 ಈ ವಾರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಕಳೆದೆರಡು ದಿನಗಳಿಂದ ಸತತವಾಗಿ ಮಂಡಕಳ್ಳಿ ಕೋವಿಡ್ ಕೇರ್ ಸೆಂಟರ್ ಸಿದ್ಧಗೊಳಿಸಲಾಗಿದ್ದು ಇವತ್ತಿನಿಂದ ರೋಗಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ಮೈಸೂರು ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭ ಮಾಡಲಿದೆ. 700 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ವಾರ್ ರೂಮ್ ಕೂಡ ಸಿದ್ಧವಾಗಿದೆ. ಈಗಾಗಲೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಗಿದೆ. ಕೊರೊನಾ ಲಸಿಕೆ ಪಡೆಯದವರಿಗೆ ಕೂಡಲೇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಮಾಸ್ಕ್ ಧರಿಸದೇ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತದ ಜೊತೆ ಜನರು ಸಹಕರಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆದಷ್ಟು ಎನ್ 95 ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದಿದ್ದಲ್ಲಿ 99% ಸೋಂಕು ತಗುಲುವ ಸಾಧ್ಯತೆ ಇದೆ. ಒಂದು ವೇಳೆ ಕೊರೊನಾ ಸೋಂಕು ತಗುಲಿದರೂ ಗಾಬರಿಯಾಗಬಾರದು. ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಿ. ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಡಿ. ಆಗ ಮಾತ್ರ ಕೊರೊನಾದ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಳ ಮಾಡಲಾಗುತ್ತದೆ. ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಅರಮನೆಗೆ ಒಂದು ಬಾರಿ 200ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಹಾಗೆಯೇ ವಸ್ತು ಪ್ರದರ್ಶನವನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮಾರ್ಗ ಸೂಚಿಗಳ ಕಟ್ಟುನಿಟ್ಟಿನ ಪಾಲನೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು
ಮಾಸ್ಕ್ ಧರಿಸದೇ ಸಂಚರಿಸುವವರಿಗೆ ಇವತ್ತಿನಿಂದ ಕ್ರಮ ತೆಗೆದುಕೊಳ್ಳುತ್ತೇವೆ. ದಯವಿಟ್ಟು ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. ನಿಮಗೆ ಇನ್ಫೆಕ್ಷನ್ ಬರುವ ಸಾದ್ಯತೆ ಕಡಿಮೆ. ದಯವಿಟ್ಟು ಕೋವಿಡ್ ಪಾಸಿಟಿವ್ ಆದರೆ ಹೆದರಬೇಡಿ. ಸರ್ಕಾರಿ ಗೈಡ್ ಲೈನ್ ಪ್ರಕಾರ ಲಕ್ಷಣಗಳು ಕಡಿಮೆ ಬಂದರೆ ಹೋಂ ಐಸೋಲೇಶನ್, ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯಿರಿ, ನಿಜವಾಗಿಯೂ ಅವಶ್ಯಕತೆ ಇರುವವರಿಗೆ ಆಸ್ಪತ್ರೆಗೆ ದಾಖಲಾಗಿ. ಕೇರ್ ತಗೊಳ್ಳಿ, ಐಸೋಲೇಟ್ ಮಾಡಿಕೊಳ್ಳಿ, ಪಲ್ಸ್ ಆಕ್ಸಿಮೀಟರ್ ಮೂಲಕ ಚೆಕ್ ಮಾಡಿಕೊಂಡು 95ಕ್ಕಿಂತ ಕಡಿಮೆ ಇದ್ದರೆ ಆಸ್ಪತ್ರೆಗೆ ದಾಖಲಾಗಿ ಎಂದರಲ್ಲದೇ ಒಮಿಕ್ರಾನ್ ಅಷ್ಟೊಂದು ಅಪಾಯಕಾರಿಯಲ್ಲ, ಆಸ್ಪತ್ರೆಗೆ ದಾಖಲಾಗುವ ಸಂಭವ ಕಡಿಮೆ ಇರುತ್ತದೆ. ವೈದ್ಯರು ಹೇಳಿದ ನಿಯಮಗಳನ್ನು ಪಾಲಿಸಿ ಕೋವಿಡ್ ಬರದಂತೆ ಕೋವಿಡ್ ನಿಂದ ದೂರವಿರಿ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)