ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಮೇಕೆದಾಟು ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದ ಫಿಲ್ಮ್ ಚೇಂಬರ್ : ಕೆಲ ಸದಸ್ಯರಿಂದ ವಿರೋಧಿಸಿ ಪ್ರತಿಭಟನೆ

ರಾಜ್ಯ(ಬೆಂಗಳೂರು),ಜ.10 :- ಕನ್ನಡ ಫಿಲ್ಮ್ ಚೇಂಬರ್ ಮೇಕೆದಾಟು ಪಾದಯಾತ್ರೆಗೆ ಬೆಂಬಲ ಸೂಚಿಸಿರುವ ವಿರುದ್ಧ ಫಿಲ್ಮ್ ಚೇಂಬರ್ ನ ಕೆಲ ಸದಸ್ಯರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಕನ್ನಡ ಫಿಲ್ಮ್ ಚೇಂಬರ್ ಕಛೇರಿಯ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದ ಪ್ರತಿಭಟನಾಕಾರರು ಮಾಧ್ಯಮಗಳೊಂದೊಗೆ ಮಾತನಾಡಿ  ಕನ್ನಡ ಫಿಲ್ಮ್ ಚೇಂಬರ್ ಇಡೀ ಚಿತ್ರರಂಗವನ್ನು ಒಂದು ಪಕ್ಷಕ್ಕೆ ಒತ್ತೆ ಇಟ್ಟಿರುವುದು ಸರಿಯಲ್ಲ. ಚಿತ್ರರಂಗದ ಸದಸ್ಯರ ಒಪ್ಪಿಗೆ ಪಡೆಯದೇ ಕೆಲವರು ಮಾತ್ರ ನಿರ್ಧಾರ ಕೈಗೊಂಡಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆ ಇದೆ, ಅದನ್ನೆಲ್ಲಾ ಬಿಟ್ಟು ಪಾದಯಾತ್ರೆ ಹೊರಟಿದ್ದಾರೆ. ಅಲ್ಲದೇ ಪಾದಯಾತ್ರೆಗೆ ಸಂಘದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದವರನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಪ್ರತಿಭಟನೆಯಲ್ಲಿ ನಿರ್ಮಾಪಕ ಜೆ.ಜೆ. ಶ್ರೀನಿವಾಸ್, ನಿರ್ದೇಶಕ ನಾಗರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು.(ಎಸ್.ಎಂ)

Leave a Reply

comments

Related Articles

error: