ಕರ್ನಾಟಕಪ್ರಮುಖ ಸುದ್ದಿ

ಸಿಎಂಗೆ ಕೊರೊನಾ ಸೋಂಕು ಬೆನ್ನಲ್ಲೇ ಐಸೋಲೇಷನ್ ನಲ್ಲಿ ಆರೋಗ್ಯ ಸಚಿವರು

ರಾಜ್ಯ(ಬೆಂಗಳೂರು),ಜ.11 :- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ  ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ವಯಂಪ್ರೇರಿತರಾಗಿ ಐಸೋಲೇಷನ್ ಆಗುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಾನು ಸಿಎಂ ಅವರ ಪ್ರಾಥಮಿಕ ಸಂಪರ್ಕಿತನಾಗಿದ್ದೆ. ಹೀಗಾಗಿ ಸ್ವಯಂಪ್ರೇರಿತನಾಗಿ ಐಸೋಲೇಷನ್ ಆಗಿದ್ದೇನೆ. 2 ದಿನ ನನ್ನನ್ನು ಭೇಟಿಯಾಗಲು ಯಾರೂ ಬರಬೇಡಿ. ಸದ್ಯ ನನ್ನ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ರದ್ದಾಗಿದ್ದು, 2 ದಿನದ ಬಳಿಕ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ವರದಿ ಬರಲಿದೆ. ಅಲ್ಲಿಯವರೆಗೂ ವರ್ಚುವಲ್ ಮೂಲಕ ಸಭೆ ನಡೆಸುತ್ತೇನೆ. ವರದಿಯಲ್ಲಿ ನೆಗೆಟಿವ್ ಬಂದರೆ ಕೆಲಸ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಬುಧವಾರದಿಂದ ಎಂದಿನಂತೆ ಕೆಲಸದಲ್ಲಿ ಭಾಗಿಯಾಗುತ್ತೇನೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. (ಎಸ್.ಎಂ)

Leave a Reply

comments

Related Articles

error: