ದೇಶಪ್ರಮುಖ ಸುದ್ದಿ

ನವದೆಹಲಿಯಲ್ಲಿ ಕೊರೋನಾ ಸ್ಫೋಟ : ಜೈಲಿನ 66 ಖೈದಿಗಳು, 48 ಜೈಲು ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ದೇಶ(ನವದೆಹಲಿ),ಜ.11:- ದೆಹಲಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರಾಜಧಾನಿಯಲ್ಲಿ ಪ್ರತಿದಿನ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಏತನ್ಮಧ್ಯೆ ದೆಹಲಿ ಜೈಲುಗಳಲ್ಲಿ 66 ಖೈದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಅದೇ ಸಮಯದಲ್ಲಿ 48 ಜೈಲು ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಸೋಮವಾರ ದೆಹಲಿಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಶೇ.25ಕ್ಕೆ ಏರಿಕೆಯಾಗಿದೆ. ರಾಜಧಾನಿ ದೆಹಲಿಯ ತಿಹಾರ್ ಜೈಲು, ಮಂಡೋಲಿ ಜೈಲು ಮತ್ತು ರೋಹಿಣಿ ಜೈಲುಗಳಲ್ಲಿ ಖೈದಿಗಳು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 114 ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಐಸೋಲೇಟ್ ಮಾಡಲಾಗಿದೆ.
ಮೂಲಗಳ ಪ್ರಕಾರ ತಿಹಾರ್ ಜೈಲಿನಲ್ಲಿರುವ 42 ಖೈದಿಗಳು ಮತ್ತು 34 ಜೈಲು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮಂಡೋಲಿ ಜೈಲಿನಲ್ಲಿರುವ 24 ಖೈದಿಗಳು ಮತ್ತು 8 ಜೈಲು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇದಲ್ಲದೆ ರೋಹಿಣಿ ಜೈಲಿನಲ್ಲಿ 6 ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಪ್ರಸ್ತುತ ದೆಹಲಿಯಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 66 ಸಾವಿರಕ್ಕೆ ಏರಿದೆ. ಇದೇ ಸೋಮವಾರ 17 ಕೊರೊನಾ ಸೋಂಕಿತರ ಸಾವು ಕೂಡ ದಾಖಲಾಗಿದೆ. ದೆಹಲಿಯಲ್ಲಿ ಹಲವು ಹಿರಿಯ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: