ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ನಿಂದ ಮೂವತ್ತು ಜಿಲ್ಲೆಗಳಿಗೆ ಚುನಾವಣಾ ವೀಕ್ಷಕರ ನೇಮಕ: ಹೆಚ್.ಡಿ.ಕೆ

ಪ್ರಮುಖಸುದ್ದಿ, ರಾಜ್ಯ(ಹಾಸನ) ಮೇ.8:- ಶಾಸಕ ಸುರೇಶ್ ಬಾಬು ನೇತೃತ್ವದ ಚುನಾವಣಾ ಸಮಿತಿಯಿಂದ ಸೋಮವಾರ ಮೂವತ್ತು ಜಿಲ್ಲೆಗಳಿಗೆ ಚುನಾವಣಾ ವೀಕ್ಷಕರನ್ನು ನೇಮಕ ‌ಮಾಡಲಾಗುತ್ತಿದೆ. ಜಿಲ್ಲೆ,ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ‌ ಪದಾಧಿಕಾರಿಗಳ ನೇಮಕದ ಅಧಿಕಾರ ವೀಕ್ಷಕರಿಗೆ ನೀಡಲಾಗಿದೆ. ಮೇ.30 ರ ಒಳಗಾಗಿ ಪದಾಧಿಕಾರಿಗಳ ನೇಮಕ‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಾನೂ ಕೂಡಾ ಈ ಚುನಾವಣಾ ಸಮಿತಿಯಲ್ಲಿ ಇದ್ದೇನೆ  ಎಂದು ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನಲ್ಲಿ ಎಲ್ಲವನ್ನೂ ದೇವೇಗೌಡರು ಮತ್ತು ಕುಮಾರಸ್ವಾಮಿ ನಿರ್ಧರಿಸುತ್ತಾರೆ ಎಂಬ ಅಪವಾದ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ರೂಪಿಸಲಾಗಿದೆ. ಜತೆಗೆ ಪಕ್ಷದ ಕೆಲವರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಹೀಗಾಗಿ ಎರಡನೆ ಹಂತದ ನಾಯಕರನ್ನು ಬೆಳೆಸಬೇಕು ಎಂದು ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ. 150 ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರಿಗೆ ರವಾನಿಸಿದ್ದೇವೆ. ಹಲವಾರು‌ ಕ್ಷೇತ್ರಗಳಲ್ಲಿ ಪದಾಧಿಕಾರಿಗಳ ನೇಮಕ ಆಗಿಲ್ಲದ ಕಾರಣ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಿದೆ ಎಂದರು. (ಎಸ್.ಎನ್)

Leave a Reply

comments

Related Articles

error: