ಕರ್ನಾಟಕಪ್ರಮುಖ ಸುದ್ದಿಮೈಸೂರು

ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ : ಭ್ರಷ್ಟಾಚಾರದ ಕುರಿತು ಮಾತನಾಡಲು ನೈತಿಕತೆ ಇಲ್ಲ

ಪ್ರಮುಖಸುದ್ದಿ, ರಾಜ್ಯ(ಮೈಸೂರು) ಮೇ.8:- ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರು ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂಬ ಶೋಭಾ ಹೇಳಿಕೆಗೆ ತಿರುಗೇಟು ನೀಡಿದರು. ರಾಜ್ಯ ಸರ್ಕಾರದಿಂದ .3300 ಕೋಟಿರೂ  ಹಿಂಗಾರು ಪರಿಹಾರ ಕೇಳಿದ್ದೇವೆ ಅದನ್ನು ಶೋಭಾ ಕರಂದ್ಲಾಜೆ ಕೊಡಿಸಲಿ. ಆಮೇಲೆ ನೋಡೋಣ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕದೆ ಇದೆಯಾ ಎಂದು ಪ್ರಶ್ನಿಸಿದರು. ಒಂದು ಬಾರಿ ಬಿಜೆಪಿ ಮಂದಿ ಅವರ ಬೆನ್ನು ನೋಡಿಕೊಳ್ಳಲಿ ಎಂದರಲ್ಲದೇ, ಯಡಿಯೂರಪ್ಪ, ಈಶ್ವರಪ್ಪ, ಶೋಭಾಕರಂದ್ಲಾಜೆಗೆ ಮಾತಿನಲ್ಲೇ  ಚಾಟಿ ಬೀಸಿದರು. ಬಿಜೆಪಿ ರಾಜ್ಯಾಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಮಾಡುವ ವಿಚಾರಕ್ಕೆ ಸಂಬಂದಿಸಿದಂತೆ ಹಿಂದುಳಿದ ವರ್ಗದವರು ಯಾರೂ ಬಿಜೆಪಿಗೆ ಹೋಗಲ್ಲ. ಅವರು ಎಷ್ಟು ಪ್ರವಾಸ ಮಾಡಿದರೂ ಅಷ್ಟೇ. ಬಿಜೆಪಿ ಸಾಮಾಜಿಕ ನ್ಯಾಯ ವಿರೋಧಿ,ಮೀಸಲಾತಿ ವಿರೋಧಿ ಅನ್ನೋದು ಅವರಿಗೆ  ಗೊತ್ತಿದೆ.

ರಾಜ್ಯ ಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಗೂಂಡಾ ರಾಜ್ಯ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು ನಿರ್ಮಲಾ ಸೀತಾರಾಮನ್ ಜವಾಬ್ದಾರಿ ಅರಿತು ಮಾತನಾಡಲಿ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ  ಇಷ್ಟು ಇಂಡಸ್ಟ್ರೀಸ್ ಬರಲು ಸಾಧ್ಯವಿತ್ತಾ? ಬಿಜೆಪಿ ಅಧಿಕಾರದಲ್ಲಿದ್ದಾಗ ಏನಾಗಿತ್ತು, ಅವರು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರು ಅಲ್ಲವಾ ಎಂದು ಪ್ರಶ್ನಿಸಿದರು.  ವಿಶ್ವನಾಥ್ ಜೆಡಿಎಸ್ ಸೇರೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಯಾರೂ ಕೂಡ ಕಾಂಗ್ರೆಸ್ ಬಿಟ್ಟು ಹೋಗಲ್ಲ . ಈ ವಿಚಾರದಲ್ಲಿ ಯಾವ ನಾಯಕರೊಟ್ಟಿಗೂ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: