ಕರ್ನಾಟಕಪ್ರಮುಖ ಸುದ್ದಿ

ಮುಂದಿನ ವರ್ಷದಿಂದ ಶಾಲೆಗಳ ಪಠ್ಯದಲ್ಲಿ ಎರಡು ಹೊಸ ವಿಷಯಗಳು ; ಸಿಎಂ ಬಸವರಾಜ್ ಬೊಮ್ಮಾಯಿ

ರಾಜ್ಯ(ಬೆಂಗಳೂರು),ಜ.17 :- ಶಾಲೆಗಳಲ್ಲಿ ಇನ್ನೋವೇಟೀವ್ ಮತ್ತು ಎಂಟರ್ ಪ್ರಿನರ್ ಶಿಪ್ ಎಂಬ ಎರಡು ಹೊಸ ವಿಷಯಗಳನ್ನು ಮುಂಬರುವ ವರ್ಷದಿಂದ ಶಿಕ್ಷಣದಲ್ಲಿ, ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ಮಾಡಲಾಗಿದೆ. ಹೊಸ ಆಲೋಚನೆ ಹಾಗೂ ಉದ್ಯಮಶೀಲತೆಗೆ ಉತ್ತೇಜನ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಐಟಿಐ, ಡಿಪ್ಲೋಮಾ ಕಾಲೇಜು ಉನ್ನತೀಕರಣ ಕೂಡ ಮಾಡುವ ಯೋಚನೆ ಇದೆ. ಶಾಲೆ ಕಾಲೇಜುಗಳಲ್ಲಿ ಕೂಡ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ, ವೇಜ್ಞಾನಿಕ ಚಿಂತನೆ ಅದಲ್ಲದೆ ನವ ಉದ್ಯಮಕ್ಕೆ ಭದ್ರ ಬುನಾದಿ ಹಾಕಬೇಕಾದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ತರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ ಮುಂತಾದ ಕಡೆ, ಅತಿ ಹೆಚ್ಚು ಉದ್ಯೋಗ ಕೊಡುವ ರಂಗದಲ್ಲಿ ಸ್ಟಾರ್ಟ್ ಆಪ್ ಗಳು ಬರಬೇಕು. ಅಲ್ಲಿ ಹೊಸ ಚಿಂತನೆ, ಹೊಸ ಕಾಂತ್ರಿ ಆಗಬೇಕು. ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಶಿಕ್ಷಣ, ಆರೋಗ್ಯ ವಿಭಾಗದಲ್ಲಿ ಕೂಡ ಹೆಚ್ಚಿನ ಉತ್ತೇಜನ ಕೊಡಲಾಗುತ್ತದೆ. ಹೆಣ್ಣು ಮಕ್ಕಳ ಹಾಗೂ ಮಕ್ಕಳ ಸಂಬಂಧಿಸಿದ ಯೋಜನೆಗಳು ಅತಿಹೆಚ್ಚು ತರುವ ಮೂಲಕ ಅದನ್ನು ಬಲಪಡಿಸುವ ಆಶಯ ಇದೆ ಎಂದು ಮುಖ್ಯುಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿಯನ್ನು ನೀಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: