ಕರ್ನಾಟಕಪ್ರಮುಖ ಸುದ್ದಿ

ದೊಡ್ಡಬಸವನಹಳ್ಳಿಯ ಕೆರೆಯಲ್ಲಿ ಅಗ್ನಿಯ ನರ್ತನ : ಭಯಭೀತರಾದ ಗ್ರಾಮಸ್ಥರು

ಪ್ರಮುಖಸುದ್ದಿ, ರಾಜ್ಯ(ಹಾಸನ)ಮೇ.8: – ಮೈಸೂರಿನಲ್ಲಿ ಭೂಮಿಯಲ್ಲಿ ಬೆಂಕಿ, ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಘಟನೆಗಳು ಮಾಸುವ ಮುನ್ನವೇ,  ಹಾಸನ ಜಿಲ್ಲೆಯ ದೊಡ್ಡಬಸವನಹಳ್ಳಿಯ ಕೆರೆಯಲ್ಲಿ ಮುಗಿಲೆತ್ತರಕ್ಕೆ ಬೆಂಕಿ ಚಿಮ್ಮಿದ್ದು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.  ಜನ-ಜಾನುವಾರಗಳು ಪ್ರತಿನಿತ್ಯ ಈ ಕೆರೆಯ ನೀರನ್ನೇ ಅವಲಂಬಿಸಿದ್ದು ಕೆರೆಯಲ್ಲಿ ಅಗ್ನಿ ನರ್ತಿಸಲಾರಂಭಿಸಿದೆ.  ಗ್ರಾಮಸ್ಥರು ಭಯಭೀತರಾಗಿದ್ದು, ನೀರನ್ನು ಬಳಸಲು ಭಯಗೊಂಡಿದ್ದಾರೆ. ಬೆಂಕಿಯ ತೀವ್ರತೆಗೆ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು,  ಕೈಗಾರಿಕೆಗಳ ತ್ಯಾಜ್ಯವನ್ನು ಕೆರೆಗೆ ಸುರಿದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಬಂಧ ಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: