ಸುದ್ದಿ ಸಂಕ್ಷಿಪ್ತ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಯೋಗಿಕ್ ಶಿಬಿರ ಅವಶ್ಯಕ
ಮೈಸೂರು, ಮೇ 8: ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಯೋಗಿಕ್ ಬೇಸಿಗೆ ಶಿಬಿರಗಳಿಂದ ಸಾಧ್ಯವೆಂದು ಯೋಗ ಪ್ರವೀಣ ಶಿವಪ್ರಕಾಶ್ ಗುರೂಜಿ ತಿಳಿಸಿದರು.
ಶ್ರೀ ಪರಮಹಂಸ ಯೋಗ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ಯೋಗಿಕ್ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು. ಯೋಗ, ಪ್ರಾಣಾಯಾಮ, ಧ್ಯಾನ, ಮುದ್ರೆ ಹಾಗೂ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಈ ಶಿಬಿರದಲ್ಲಿ ನಡೆಸಲಾಯಿತು.
ಶಿಬಿರದ ಉದ್ಘಾಟನೆಯನ್ನು ಮಕ್ಕಳಾ ಮುಕುಂದ, ಪುನೀತ್, ಚಿರಂತನ, ಲೋಕಾಷರವರು ಮಾಡಿದರು. (ಎಲ್.ಜಿ)