ಪ್ರಮುಖ ಸುದ್ದಿ

ಬೇನಾಮಿ ಆಸ್ತಿ: ಯತ್ರೀಂದ್ರ ಸಿದ್ದರಾಮಯ್ಯ ವಿರುದ್ಧ ದೂರು

ಪ್ರಮುಖ ಸುದ್ದಿ ಬೆಂಗಳೂರು, ಮೇ ೮: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೂರಾರು ಕೋಟಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ವರ್ತೂರು ಕನಕದಾಸ ಎಂಬುವವರು ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಯತೀಂದ್ರ ಅವರು ತಮ್ಮ ಹೆಸರಿನಲ್ಲಿ ಅಕ್ರಮವಾಗಿ ನೂರಾರು ಕೋಟಿ ಆಸ್ತಿ ಹೊಂದಿದ್ದು ಅದನ್ನು ತನಿಖೆ ಮಾಡಬೇಕು ಎಂದು ಬೇನಾಮಿ ಆಸ್ತಿ ವ್ಯವಹಾರಗಳ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿರುವ ಅವರು, ಯತ್ರೀಂದ್ರ ಅವರ ಹೆಸರಿನಲ್ಲಿರುವ ಮ್ಯಾಟ್ರಿಕ್ ಇಮೇಜಿಂಗ್ ಸಲ್ಯೂಶನ್ಸ್ ಕಂಪನಿಯ ವಿರುದ್ಧವೂ ದೂರು ದಾಖಲಿಸಿದ್ದಾರೆ. ಈ ಹಿಂದೆ ಸರ್ಕಾರದ ವತಿಯಿಂದ ಕರೆದಿದ್ದ ಟೆಂಡರ್ ಪಡೆದುಕೊಳ್ಳಲು ಅಪ್ಪನ ಪ್ರಭಾವ ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ ಅಧಿಕಾರಿಗಳ ಸಭೆ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಬೇನಾಮಿ ಆಸ್ತಿ ದೂರು ದಾಖಲಾಗಿರುವುದರಿಂದ ಅವರ ರಾಜಕೀಯ ಬೆಳವಣಿಗೆಗೆ ಹಿನ್ನಡೆಯಾಗಲಿದೆ (ವರದಿ ಬಿ.ಎಂ)

Leave a Reply

comments

Related Articles

error: