
ಮೈಸೂರು
ಒಕ್ಕಲಿಗರ ಯುವ ಶಕ್ತಿ ವೇದಿಕೆ ವತಿಯಿಂದ ಬಾಲಗಂಗಾಧರನಾಥ ಶ್ರೀ ಜಯಂತಿ ಆಚರಣೆ
ಮೈಸೂರು,ಜ.18:- ಒಕ್ಕಲಿಗರ ಯುವ ಶಕ್ತಿ ವೇದಿಕೆ, ಮೈಸೂರು ಯುವ ಬಳಗ ವತಿಯಿಂದ ಆದಿಚುಂಚನಗಿರಿಯ ಬಾಲಗಂಗಾಧರ ಸ್ವಾಮಿ ಜನ್ಮ ಜಯಂತಿಯನ್ನು ಮೈಸೂರಿನ ವಾರ್ಡ್ ನಂ 23ರ ನಾರಾಯಣಶಾಸಿ ರಸ್ತೆಯಲ್ಲಿರುವ ಸದ್ವಿದ್ಯಾ ವೃತ್ತದಲ್ಲಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಮುಡಾ ಸದಸ್ಯರಾದ ನವೀನ್ ಕುಮಾರ್ ಮಾತನಾಡಿ ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಬಡ ಜನರ ಸೇವೆಯನ್ನು ಮಾಡಿದರು. ‘ಹಸಿರು ಕ್ರಾಂತಿ ಹರಿಕಾರ’ರೆಂದು ಹೆಸರುಗಳಿಸಿದ ಶ್ರೀಗಳು 5 ಕೋಟಿ ಗಿಡಗಳನ್ನು ನೆಟ್ಟರು ಎಂದರು. ವೇದಿಕೆ ಅಧ್ಯಕ್ಷರಾದ ಪ್ರಮೋದ್ ಗೌಡ ಮಾತನಾಡಿ ಆದಿ ಚುಂಚನಗಿರಿ ಮಠದ ಹೆಸರಿನಲ್ಲಿ ಶಾಲೆ,ಕಾಲೇಜು, ಆಸ್ಪತ್ರೆ, ಪರಿಸರ, ಪ್ರಾಣಿ ಸಂರಕ್ಷಣೆ, ವೇದಾಧ್ಯಯನ, ಕೃಷಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಯುವ ಶಕ್ತಿ ವೇದಿಕೆ ಕಾರ್ಯದರ್ಶಿಯಾದ ಮಂಜುನಾಥ್ ಗೌಡ, ಮುಖಂಡರಾದ ಲಕ್ಷ್ಮಿ ಸುದರ್ಶನ್ ,ಶ್ರೀನಿವಾಸ್, ವಿಘ್ನೇಶ್ವರ್ ಭಟ್, ವಿವೇಕ್, ರವಿ ,ಕೆಂಪರಾಜು ,ನಂಜುಂಡಿ ,ಕುಮಾರ್ , ಸಂತೋಷ್ ಪ್ರಶಾಂತ್ ,ಶಿವಕುಮಾರ್ ನವೀನ್, ಸನತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)