ಕರ್ನಾಟಕಪ್ರಮುಖ ಸುದ್ದಿ

ಭೂಮಿ ತಂತ್ರಾಂಶ; ‘ಕಲ್ಟಿವೇಟರ್ ಕರೆಕ್ಷನ್ ಮ್ಯುಟೇಶನ್ ಸೌಲಭ್ಯ

ರಾಜ್ಯ(ಮಡಿಕೇರಿ) ಜ.20:-ಆರ್‍ಟಿಸಿ ಮ್ಯಾನೇಜ್‍ಮೆಂಟ್ ತಂತ್ರಾಂಶದಲ್ಲಿ ಪಹಣಿ ಕಾಲಂ 12(2) ರಲ್ಲಿ ಸಾಗುವಳಿದಾರರ ಹೆಸರನ್ನು ದಾಖಲಿಸಲು ಹಾಗೂ ತೆಗೆಯಲು ಅವಕಾಶವಾಗುವಂತೆ ‘ಕಲ್ಟಿವೇಟರ್ ಕರೆಕ್ಷನ್ ಮ್ಯುಟೇಶನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಭೂಮಾಪನ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಭೂಮಿ ತಂತ್ರಾಂಶದ ದಾಖಲೆಯು ಮಹತ್ವದ ದಾಖಲೆಯಾಗಿದ್ದು, ಈ ತಂತ್ರಾಂಶದಲ್ಲಿ ಜವಾಬ್ದಾರಿಯುವಾಗಿ ಕಾರ್ಯ ನಿರ್ವಹಿಸಬೇಕಿದೆ. ಆದ್ದರಿಂದ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿಕೊಂಡು ಜಾಗರೂಕತೆಯಿಂದ ಪಹಣಿಯಲ್ಲಿ ದಾಖಲಾಗಿರುವ ಸಾಗುವಳಿದಾರರ ಹೆಸರನ್ನು ತಿದ್ದುಪಡಿ ಮಾಡುವಂತೆ ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ನಿರ್ದೇಶಿಸಲು ಸೂಚಿಸಿದೆ.
ಹಾಗೆಯೇ ಪಹಣಿಯಲ್ಲಿ ಸಾಗುವಳಿದಾರರ ಹೆಸರನ್ನು ತಪ್ಪಾಗಿ ದಾಖಲಿಸಿದಲ್ಲಿ/ ರದ್ದುಪಡಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಹೊರಬೇಕಿದೆ ಎಂದು ಭೂಮಾಪನ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಪಹಣಿ ಕಾಲಂ 12(2) ರಲ್ಲಿ ಸಾಗುವಳಿದಾರರ(ಕಲ್ಟಿವೇಟರ್) ಹೆಸರು ದಾಖಲಿಸಲು ಹಾಗೂ ತಪ್ಪಾಗಿ ದಾಖಲಾಗಿರುವ ಸಾಗುವಳಿದಾರರ ಹೆಸರು ರದ್ದುಪಡಿಸಲು ಅವಕಾಶ ಕಲ್ಪಿಸುವಂತೆ ಕೋರಿ ರಾಜ್ಯದ ಹಲವು ಜಿಲ್ಲೆಗಳಿಂದ ಪತ್ರಗಳು ಸ್ವೀಕೃತವಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: