ಮೈಸೂರು

ತಾಂಡವಪುರ ಗ್ರಾಮದೇವತೆ ಮಾರಮ್ಮನ ಜಾತ್ರೆ ರದ್ದು

ಮೈಸೂರು, ಜ.19:- ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ಕ್ಷೇತ್ರಕ್ಕೆ ಸೇರುವ ಇತಿಹಾಸ ಪ್ರಸಿದ್ಧಿ ಗ್ರಾಮದೇವತೆ ಮಾರಮ್ಮನ ಜಾತ್ರೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಫೆಬ್ರವರಿ 15 ಮತ್ತು 16 ರಂದು ನಡೆಯಬೇಕಿದ್ದ ಜಾತ್ರಾಮಹೋತ್ಸವವನ್ನು ಮಹಾಮಾರಿ ಕೊರೋನಾ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಮಾರಮ್ಮನ ಜಾತ್ರೆ ಮಹೋತ್ಸವ ವನ್ನು ರದ್ದುಗೊಳಿಸಲಾಗಿದೆ.

ಸಂಪ್ರದಾಯದಂತೆ ದೇವಿಗೆ ಪೂಜೆ ಸಲ್ಲಿಸಲಾಗುವುದು ಎಂದು ತಾಂಡವಪುರ ಹಾಗೂ ಬಂಚಳ್ಳಿ ಹುಂಡಿ ಗ್ರಾಮದ ಯಜಮಾನರುಗಳು ಮುಖಂಡರುಗಳು ಸಭೆ ಸೇರಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಕೊರೋನಾ ಹಿನ್ನೆಲೆಯಲ್ಲಿ ಈ ಜಾತ್ರಾಮಹೋತ್ಸವವನ್ನು ರದ್ದುಗೊಳಿಸಲಾಗಿದೆ.

ಫೆಬ್ರುವರಿ 15ರಂದು ನಡೆಯಬೇಕಿದ್ದ ಕೊಂಡೋತ್ಸವ ರದ್ದುಗೊಳಿಸಲಾಗಿದೆ. 16ರಂದು ಬುಧವಾರ ಸಂಪ್ರದಾಯದ ಪ್ರಕಾರ ಗ್ರಾಮಗಳ ಒಳಿತಿಗಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಆದ್ದರಿಂದ ಭಕ್ತಾದಿಗಳು ಕೋರೋನ ಹಿನ್ನೆಲೆಯಲ್ಲಿ ಸಹಕಾರ ನೀಡಬೇಕೆಂದು ಗ್ರಾಮದ ಮಾಜಿ ಚೇರ್ಮನ್ ವೆಂಕಟೇಶ್, ಗೌಡಿಕೆ ಶಿವಣ್ಣ ,ಟಿ.ಕೆ ನಾಗೇಶ, ಬಂಚಳ್ಳಿ ಹುಂಡಿ ಗ್ರಾಮದ ಯಜಮಾನರಾದ ಬಿ.ಕೆ ಮರಿಗೌಡ, ಬಿಎಂ ಗುರುಶಾಂತ, ಬಿ.ಕೆ ಮಹದೇವು, ಬಸವರಾಜು, ಹುಚ್ಚೇಗೌಡ ಹಾಗೂ ರಾಜು ಟಿ, ಎಂ ರವಿ, ಮಲ್ಲಪ್ಪ, ಕೆಂಪಣ್ಣ ಸೇರಿದಂತೆ ಗ್ರಾಮದ ಮುಖಂಡರು ಸಭೆಯಲ್ಲಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: