ಮೈಸೂರು

ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ

ಮೈಸೂರು,ಜ.19:- ಶಾರ್ಟ್ ಸರ್ಕ್ಯೂಟ್ ನಿಂದಾಗಿ  ಥರ್ಮೋಕೋಲ್ ಫ್ಯಾಕ್ಟರಿ ಒಂದಕ್ಕೆ  ಬೆಂಕಿ ಬಿದ್ದಿರುವ ಘಟನೆ ಮೈಸೂರಿನ  ಅಶೋಕಪುರಂ ರೈಲ್ವೆ ನಿಲ್ದಾಣ ಸಮೀಪ ನಡೆದಿದೆ.

ಅಶೋಕಪುರಂ ರೈಲ್ವೆ ನಿಲ್ದಾಣ ಸಮೀಪ ಇರುವ ಈ ಕಾರ್ಖಾನೆಯಲ್ಲಿ ಸಂಜೆ ಸುಮಾರು 5 ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಬೆಂಕಿಯನ್ನು  ಕಂಡು ಕಾರ್ಖಾನೆಯಿಂದ ಕಾರ್ಮಿಕರು ಹೊರ ಓಡಿದ್ದಾರೆ. ಈ ವೇಳೆ ಲಕ್ಷಾಂತರ ಮೌಲ್ಯದ ಥರ್ಮೋಕೋಲ್ ಬೆಂಕಿಗಾಹುತಿಯಾಗಿದೆ. ಆದರೆ ಕೂದಲೆಳೆ ಅಂತರದಲ್ಲಿ ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು.

ಲಕ್ಷಾಂತರ ಮೌಲ್ಯದ ಥರ್ಮೋಕೋಲ್ ಸುಟ್ಟು ಭಸ್ಮವಾಗಿದ್ದು, ಈ ಸಂಬಂಧ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್. ಎಚ್)

Leave a Reply

comments

Related Articles

error: