ಕರ್ನಾಟಕಪ್ರಮುಖ ಸುದ್ದಿ

ಕೊರೊನಾ ತಾಂತ್ರಿಕ ಸಲಹಾ ಸಮಿತಿ ಅನುಮತಿ ಕೊಟ್ಟರೆ ಶಾಲೆಗಳನ್ನು ತೆರೆಯುತ್ತೇವೆ ; ಸಚಿವ ಬಿ.ಸಿ.ನಾಗೇಶ್

ರಾಜ್ಯ(ಬೆಂಗಳೂರು),ಜ.20 : – ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ನಡುವೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಾಂತ್ರಿ ಸಲಹಾ ಸಮಿತಿ ನಾಳೆ ಅನುಮತಿ ಕೊಟ್ಟರೆ ಮಹಾನಗರಗಳಲ್ಲೂ ಶಾಲೆ ಓಪನ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, 0-5 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ ಇದೆ. ಆದರೆ ಎಸ್.ಎಸ್.ಎಲ್.ಸಿ, ಪಿಯುಸಿ ಮಕ್ಕಳಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ನಾವು ಶೈಕ್ಷಣಿಕ ದೃಷ್ಠಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಅಂತ ಅನಿಸುತ್ತದೆ ಎಂದು ಹೇಳಿದ್ದಾರೆ.

1 ರಿಂದ 10ನೇ ತರಗತಿಯಲ್ಲಿ ನಿನ್ನೆ 1250 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದೆ, ಒಟ್ಟು 6752 ಸಕ್ರಿಯ ಪ್ರಕರಣಗಳಿವೆ, ಇನ್ನು ನಿನ್ನೆ ಒಂದೇ ದಿನ ಪಿಯುಸಿಯ 166 ಮಕ್ಕಳಿಗೆ ನಿನ್ನೆ ಪಾಸಿಟಿವ್ ಆಗಿದೆ. 897 ಆ್ಯಕ್ಟಿವ್ ಕೇಸ್ ನಲ್ಲಿ ಪಿಯುಸಿ ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಸಿಎಂ ನೇತೃತ್ವದ ಸಭೆಯಲ್ಲಿ ಶಿಕ್ಷಣ ಇಲಾಖೆ ಕಡೆಯಿಂದ ಕಳೆದ ಎರಡೂ ಕೋವಿಡ್ ಅಲೆಗಳಿಂದ ಆದ ಸಮಸ್ಯೆಗಳ ಬಗ್ಗೆ ವಿವರಿಸಿದ್ದೆವು . ಕಳೆದ ಬಾರಿಯಂತೆ  ರಾಜ್ಯದಲ್ಲಿ ಒಂದೇ ಸಲ ಶಾಲೆ ಬಂದ್ ಮಾಡಬಾರದು ಅಂತ ನಿರ್ಣಯ ತೆಗೆದುಕೊಂಡೆವು. ಜಿಲ್ಲಾಧಿಕಾರಿಗಳಿಗೆ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಅನೇಕ ಜಿಲ್ಲೆಗಳಲ್ಲಿ ಈಗಲೂ ಕೂಡ ಸಂಪೂರ್ಣವಾಗಿ ಶಾಲೆಗಳು ಕ್ಲೋಸ್ ಆಗಿಲ್ಲ. ಮೈಸೂರು, ತುಮಕೂರು ಸೇರಿ ಕೆಲವು ಮಹಾನಗರಗಳಲ್ಲಿ ಶಾಲೆಗಳನ್ನು ಕ್ಲೋಸ್ ಮಾಡಲಾಗಿತ್ತು. ಈವರೆಗೂ ಕೋವಿಡ್ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಿಲ್ಲ. ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ 80 ಪ್ರತಿಶತದಷ್ಟು ಸಿಲೆಬಸ್ ಕಂಪ್ಲೀಟ್ ಮಾಡಿದ್ದೇವೆ.  ಸಿಎಂ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: