ಕರ್ನಾಟಕಪ್ರಮುಖ ಸುದ್ದಿ

ಜ.21 ರಂದು ವಿದ್ಯುತ್ ವ್ಯತ್ಯಯ

ರಾಜ್ಯ(ಮಡಿಕೇರಿ) ಜ.21:-ಮಡಿಕೇರಿ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಎಫ್8 ಸಂಪಾಜೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಡೆಸಬೇಕಿರುವುದರಿಂದ ಜನವರಿ, 21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ತಾಳತ್ತಮನೆ, ಕಾಟಕೇರಿ, ಮದೆನಾಡು, ಜೋಡುಪಾಲ, ಸಂಪಾಜೆ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.(ಜಿ.ಕೆ,ಎಸ್.ಎಚ್)

Leave a Reply

comments

Related Articles

error: