ಮೈಸೂರು

ಬನ್ನಿ ನಮ್ಮೂರನ್ನು ಹಸಿರಾಗಿಸೋಣ : ಬೀಜದ ಚೆಂಡು ಬಿತ್ತನೆಗೆ ಚಾಲನೆ ನೀಡಿದ ಡಾ.ಪುಷ್ಪಾ ಅಮರನಾಥ್

ಮೈಸೂರು, ಮೇ.8:-  ಹುಣಸೂರಿನ ಗೋ ಗ್ರೀನ್ ಕ್ಲಬ್, ಸ್ನೇಹ ಜೀವಿ ಸಂಸ್ಥೆ, ಅರಣ್ಯ ಇಲಾಖೆ,  ತಾಲೂಕು ಪಂಚಾಯತ್ , ಗ್ರಾಮಪಂಚಾಯತ್  ಬೀಜಗನಹಳ್ಳಿ  ವತಿಯಿಂದ 1000 ಬೀಜದ ಚೆಂಡುಗಳ ಬಿತ್ತನೆ ಕಾರ್ಯಕ್ರಮವನ್ನು  ಸೋಮನಹಳ್ಳಿ ಕೆರೆಯ ಸಮೀಪ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಡಾ.ಪುಷ್ಪಾ ಅಮರನಾಥ್ ಖುದ್ದು ಬೀಜದ ಚೆಂಡುಗಳನ್ನು ಬಿತ್ತನೆ ಮಾಡಿದರು. ಹಸಿರುಳಿಸುವ  ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮವು ಬನ್ನಿ ನಮ್ಮೂರನ್ನು ಹಸಿರಾಗಿಸೋಣ ಧ್ಯೇಯ ವಾಕ್ಯದಡಿ ನಡೆಯಿತು.

ಈ ಸಂದರ್ಭ ವಲಯ ಅರಣ್ಯಾಧಿಕಾರಿ ಶಾಂತಕುಮಾರ್, ಗ್ರಾಮೀಣಾಭಿವೃದ್ಧಿ ಅಧಿಕಾರಿ ಪ್ರವೀಣ್, ಗ್ರಾಮಪಂಚಾಯತ್ ಸದಸ್ಯರಾದ ಪ್ರಭಾ, ಸ್ವಾಮಿ, ತೋಟ ನಿರ್ವಹಣೆಗಾರ ರಮೇಶ್, ಅರಣ್ಯ ಇಲಾಖಾ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು. (ವರದಿ: ಎಸ್.ಎಚ್)

Leave a Reply

comments

Related Articles

error: