ಕರ್ನಾಟಕಮೈಸೂರು

ಸೋಮಶೇಖರ್ ಮರಡೂರು ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷ ಕೊಡಮಾಡುವ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಹಿಂದೂಸ್ತಾನಿ ಗಾಯಕ ಸೋಮನಾಥ ಮರಡೂರು ಭಾಜನರಾದರು.

ಅರಮನೆ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಬಾರಿಯ ಕಾವೇರಿ ಬಿಕ್ಕಟ್ಟಿನಿಂದ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಸರಳವಾಗಿ ಮನಸೆಳೆಯಲಿದೆ. ಆ ನಿಟ್ಟಿನಲ್ಲಿ ಸರ್ಕಾರ ರೂಪ-ರೇಷೆ ಸಿದ್ಧಪಡಿಸಿದೆ. ನಾಡು-ನುಡಿ ಹಾಗೂ ಸಾಂಸ್ಕೃತಿಕ ಕಲೆಗೆ ವೇದಿಕೆಯಾಗಿರುವ ಈ ಕಾರ್ಯಕ್ರಮ, ಎಲ್ಲ ರೀತಿಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಉಣಬಡಿಸುತ್ತದೆ ಎಂದರು.

ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಕಲಾ ತಂಡಗಳು ದೇಶದ ಮೂಲೆ ಮೂಲೆಯಿಂದ ಭಾಗವಹಿಸುತ್ತಿದ್ದು, ಸಾಂಸ್ಕೃತಿಕ ಪ್ರೇರಣೆ ನೀಡಲಿದ್ದಾರೆ ಎಂದು ತಿಳಿಸಿದರು.

ವಿದ್ವಾನ್ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರಂಭ ಹಿನ್ನೆಲೆಯಲ್ಲಿ ಹಾಗೂ ದಸರಾಕ್ಕೆ ಮೆರುಗು ನೀಡಲೆಂದು ಅರಮನೆಗೆ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲೆಂದು ಬರುವವರಿಗಾಗಿ ಆಸನ ವ್ಯವಸ್ಥೆ ಕಲ್ಪಿಸಿದ್ದು, ಕುಳಿತು ನೋಡಲು ಸಮಯಾವಕಾಶ ಇಲ್ಲದವರು ಹಾಗೂ ಇದೇ ವೇಳೆ ಅರಮನೆ ಆವರಣದ ಸೊಬಗನ್ನು ಸವಿಯಲೆಂದು ಬಂದವರಿಗಾಗಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ರಂದೀಪ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಉಮಾಶಂಕರ್, ಎಡಿಸಿ ವೆಂಕಟೇಶ್ ಹಾಗೂ ಉಪ ವಿಶೇಷಾಧಿಕಾರಿ ಕೆ. ದಯಾನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: