ಕರ್ನಾಟಕಪ್ರಮುಖ ಸುದ್ದಿ

ಬಸ್ ಟೈರ್ ಸಿಡಿದು ಕಾರ್ಮಿಕ ಸಾವು

ರಾಜ್ಯ (ಬಳ್ಳಾರಿ), ಮೇ 9:  ಬಸ್ ಟೈರ್ ಬದಲಾವಣೆ ಮಾಡಬೇಕಾದರೆ ಟೈರ್ ಸಿಡಿದು ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಮೃತರನ್ನು ನಾಗರಾಜ್ (53) ಎಂದು ಗುರುತಿಸಲಾಗಿದೆ.    ಬಳ್ಳಾರಿಯ ಕೆ ಎಸ್ ಆರ್ ಟಿ ಸಿ ಡಿಪೋದ ಡಿವಿಜನಲ್ ವರ್ಕ್ ಶಾಪ್( ಡಿಬ್ಲೂಎಸ್) ನಲ್ಲಿ ಈ  ಅವಘಡ ನಡೆದಿದೆ.  ಕೆಲಸ ಮಾಡುವ ವೇಳೆ ಟೈರ್ ಸಿಡಿದ ಕಾರಣ ಸ್ಥಳದಲ್ಲೇ ನಾಗರಾಜ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.   ಮೃತ ದೇಹವನ್ನು ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.   ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. (ವರದಿ: ಎಸ್.ಎನ್.ಎಲ್.ಜಿ)

Leave a Reply

comments

Related Articles

error: