ಕರ್ನಾಟಕಪ್ರಮುಖ ಸುದ್ದಿ

ಕೋವಿಡ್, ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ : 28 ಜಿಲ್ಲಾ ಉಸ್ತುವಾರಿಗಳು ನೇಮಕ

ರಾಜ್ಯ(ಬೆಂಗಳೂರು),ಜ.24 : ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಜಿಲ್ಲಾ ಉಸ್ತುವಾರಿ  ಸಚಿವರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಲಾಗಿದೆ.

ಎಸ್.ಅಂಗಾರ- ಉಡುಪಿ ಜಿಲ್ಲಾ ಉಸ್ತುವಾರಿ, ಆರಗ ಜ್ಞಾನೇಂದ್ರ-ತುಮಕೂರು ಜಿಲ್ಲಾ ಉಸ್ತುವಾರಿ, ಡಾ.ಅಶ್ವಥ್ ನಾರಾಯಣ-ರಾಮನಗರ, ಸಿ.ಸಿ.ಪಾಟೀಲ್-ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

ಆನಂದ್ ಸಿಂಗ್ ಕೊಪ್ಪಳ ಜಿಲ್ಲಾ ಉಸ್ತುವಾರಿಯಾದರೆ ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ ಜಿಲ್ಲೆ, ಪ್ರಭುಚೌಹಾಣ್-ಯಾದಗಿರಿ, ಮುರುಗೇಶ್ ನಿರಾಣಿ-ಕಲಬುರಗಿ ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಇನ್ನೂ ಶಿವರಾಮ್ ಹೆಬ್ಬಾರ್-ಹಾವೇರಿ ಜಿಲ್ಲಾ ಉಸ್ತುವಾರಿ, ಎಸ್.ಟಿ.ಸೋಮಶೇಖರ್-ಮೈಸೂರು ಜಿಲ್ಲಾ ಉಸ್ತುವಾರಿ, ಬಿ.ಸಿ.ಪಾಟೀಲ್-ಚಿತ್ರದುರ್ಗ,ಗದಗ ಜಿಲ್ಲೆ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಭೈರತಿ ಬಸವರಾಜ್-ದಾವಣಗೆರೆ, ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೆ.ಗೋಪಾಲಯ್ಯ-ಹಾಸನ, ಮಂಡ್ಯ ಜಿಲ್ಲೆ ಉಸ್ತುವಾರಿಯಾದರೆ, ಶಶಿಕಲಾ ಜೊಲ್ಲೆ-ವಿಜಯನಗರ , ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ-ಶಿವಮೊಗ್ಗ, ಬಿ.ಸಿ.ನಾಗೇಶ್-ಕೊಡಗು, ಗೋವಿಂದ ಕಾರಜೋಳ-ಬೆಳಗಾವಿ, ಬಿ.ಶ್ರೀ ರಾಮುಲು-ಬಳ್ಳಾರಿ, ವಿ.ಸೋಮಣ್ಣ-ಚಾಮರಾಜನಗರ, ಕೆ.ಎಸ್.ಈಶ್ವರಪ್ಪ-ಚಿಕ್ಕಮಗಳೂರು, ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ, ಆಚಾರ್ ಹಾಲಪ್ಪ ಬಸಪ್ಪ-ಧಾರವಾಡ, ಶಂಕರ್.ಬಿ.ಪಾಟೀಲ್ ಮುನೇಕೊಪ್ಪ-ರಾಯಚೂರು,ಬೀದರ್, ಮುನಿರತ್ನ-ಕೋಲಾರ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆ ಮಾಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿ ಯಾರಿಗೂ ನೀಡದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಗೆ ಭಾರಿ ಪೈಪೋಟಿಯಿತ್ತು. ಆದರೆ ಬೆಂಗಳೂರು ನಗರ ಉಸ್ತುವಾರಿಯನ್ನು ಸದ್ಯ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಇನ್ನೂ ಕಾನೂನು ಸಚಿವ ಮಾಧುಸ್ವಾಮಿಗೆ ತುಮಕೂರು ಜಿಲ್ಲಾ ಉಸ್ತುವಾರಿ ಹೊಣೆ ಕೈತಪ್ಪಿದ್ದ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆ ಬೇಡವೆಂದು ನಾನೇ ಹೇಳಿದ್ದೇ. ನಾನು ನಿನ್ನಯೇ ಹೇಳಿದ್ದೆ ಯಾರನ್ನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: