ಕ್ರೀಡೆದೇಶಪ್ರಮುಖ ಸುದ್ದಿ

ಪ್ರೊ ಕಬಡ್ಡಿ ಲೀಗ್: ದಬಾಂಗ್ ಡೆಲ್ಲಿಯನ್ನು ಸೋಲಿಸಿದ ಪುಣೇರಿ ಪಲ್ಟನ್ ತಂಡ

ನವದೆಹಲಿ/ಬೆಂಗಳೂರು,ಜ.25:- ಬೆಂಗಳೂರಿನ ಶೆರಟನ್ ಗ್ರ್ಯಾಂಡ್ ವೈಟ್‌ಫೀಲ್ಡ್‌ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 8ರ 76ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 42-25 ಅಂಕಗಳಿಂದ ದಬಾಂಗ್ ಡೆಲ್ಲಿ ಕೆಸಿ ತಂಡವನ್ನು ಸೋಲಿಸಿತು.
ದಬಾಂಗ್ ಡೆಲ್ಲಿಗೆ ಇದು ಸತತ ಎರಡನೇ ಸೋಲಾದರೆ, ಪುಣೇರಿ ಪಲ್ಟಾನ್‌ ಗೆ ಇದು ಸತತ ಎರಡನೇ ಗೆಲುವು. ಈ ಗೆಲುವಿನೊಂದಿಗೆ ಪುಣೇರಿ ಪಲ್ಟಾನ್ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದ್ದು, ದಬಾಂಗ್ ಡೆಲ್ಲಿ ಇನ್ನೂ ಎರಡನೇ ಸ್ಥಾನದಲ್ಲಿದೆ.
ಈ ಗೆಲುವಿನೊಂದಿಗೆ ಪುಣೇರಿ ಪಲ್ಟಾನ್ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದ್ದು, ದಬಾಂಗ್ ಡೆಲ್ಲಿ ಇನ್ನೂ ಎರಡನೇ ಸ್ಥಾನದಲ್ಲಿದೆ. ಪಂದ್ಯದ ಆರಂಭದಿಂದಲೂ ಪುಣೇರಿ ಪಲ್ಟನ್ ತಂಡ ದಬಾಂಗ್ ಡೆಲ್ಲಿ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದು, ದ್ವಿತೀಯಾರ್ಧದಲ್ಲಿ ಡೆಲ್ಲಿ ತಂಡಕ್ಕೆ ಮರಳುವ ಅವಕಾಶವನ್ನೇ ನೀಡಲಿಲ್ಲ. ಮೋಹಿತ್ ಗೋಯತ್ ತಮ್ಮ ಸತತ ಎರಡನೇ ಸೂಪರ್ 10 ಅನ್ನು ಪೂರ್ಣಗೊಳಿಸಿದರೆ, ಸೋಂಬಿರ್ 6 ಟ್ಯಾಕಲ್ ಪಾಯಿಂಟ್‌ ಗಳನ್ನು ಪಡೆದರು. ದೆಹಲಿ ಪರ ವಿಜಯ್ 8 ರೇಡ್ ಪಾಯಿಂಟ್ ದಾಖಲಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: