ಮೈಸೂರು

ಗಡಿಯಾರ ಗೋಪುರದಲ್ಲಿ ಕೆಟ್ಟು ನಿಂತಿದೆ ಗಡಿಯಾರ!

ಮೈಸೂರು, ಮೇ.9:-  ಮೈಸೂರು ವಿಶ್ವವಿದ್ಯಾಲಯಕ್ಕೆ ಕಳಶದಂತಿದ್ದ ಗಡಿಯಾರ ಗೋಪುರದಲ್ಲಿನ ಗಡಿಯಾರ ಕೆಟ್ಟು ನಿಂತಿದ್ದು ಯಾರೂ ಅತ್ತ ಕಡೆ ಗಮನ ಹರಿಸಿಲ್ಲ.

ಮೈಸೂರು ವಿಶ್ವವಿದ್ಯಾಲಯದ ವಿಶಾಲವಾದ ಕ್ಯಾಂಪಸ್ ಎದುರು ತಲೆ ಎತ್ತಿ ನಿಂತಿದ್ದ ಗಡಿಯಾರ ಗೋಪುರ ಲಕ್ಷಾಂತರ ಜನರನ್ನು ಆಕರ್ಷಿಸಿದೆ. ಇಲ್ಲಿ ದಿನಾಲೂ ವಾಯುವಿಹಾರಿಗಳು ಬಂದು ಸ್ವಲ್ಪ ಹೊತ್ತು ನಿಂತು ಗಮನಿಸಿ ಹೋಗುತ್ತಿದ್ದರು. ಸಿಟಿಟುಡೆಯೊಂದಿಗೆ ಮಾತನಾಡಿದ ವಾಯುವಿಹಾರಿಗಳು ನಾವು ದಿನಾಲೂ ಗಡಿಯಾರ ನೋಡಿ ಮುಂದೇ ಹೋಗುತ್ತಿದ್ದೆವು. ಆದರೀಗ ಅದು ಕೆಟ್ಟು ನಿಂತಿದೆ. ನೋಡೋದಕ್ಕೆ ಬೇಸರವಾಗುತ್ತಿದೆ. ಮೂರು ದಿನಗಳಿಂದ ಕೆಟ್ಟು ನಿಂತಿದೆ. ದುರಸ್ತಿ ಮಾಡಿಲ್ಲ ಎಂದರು.

ಗಡಿಯಾರ ಹೆಚ್.ಎಂ.ಟಿ ಕಂಪನಿಯದಾಗಿದ್ದು, ಹಿಂದಿನ ಕುಲಪತಿ ಪ್ರೊ.ರಂಗಪ್ಪ ಅವರಿದ್ದಾಗ ನಿರ್ಮಿಸಲಾಗಿತ್ತು. ಕೆಟ್ಟು ನಿಂತಿರುವ ಗಡಿಯಾರ ಶೀಘ್ರದಲ್ಲಿ ದುರಸ್ತಿಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕು. (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: