ಮೈಸೂರು

ವಿದ್ಯಾರ್ಥಿನಿಯೊಂದಿಗೆ ಮುಖ್ಯ ಶಿಕ್ಷಕನ ರೊಮ್ಯಾನ್ಸ್ : ವಿಡಿಯೋ ವೈರಲ್

ಮೈಸೂರು,ಜ.25:- ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ವೈರಲ್ ಆಗಿದ್ದು, ಘಟನೆ ಹೆಚ್ ಡಿ ಕೋಟೆ ತಾಲೂಕಿನ ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾಗಿದೆ. ಕಾಮುಕ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾದೇಗುಲದಲ್ಲಿ ಅಸಹ್ಯ ವರ್ತನೆ ಸಲ್ಲದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

ಹೆಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಶಾಲೆಯೊಂದರ ಕೊಠಡಿಯೊಳಗೆ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯವನ್ನು ಹೊರಗಿನಿಂದ ಕಿಟಕಿ ಬಳಿ ನಿಂತು ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುತ್ತಿರುವುದನ್ನು ನೋಡಿದ ಕೂಡಲೇ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯನ್ನು ಬಿಟ್ಟು ಸುಮ್ಮನೆ ನಿಲ್ಲುತ್ತಾನೆ. ಅಷ್ಟರಲ್ಲಿ ಆ ವಿದ್ಯಾರ್ಥಿನಿ ಕೊಠಡಿಯಿಂದ ಹೊರ ಹೋಗುತ್ತಾಳೆ. ಇವಿಷ್ಟು ದೃಶ್ಯ ಗಳು ವಿಡಿಯೋದಲ್ಲಿದ್ದು, ವೈರಲ್ ಆಗಿದೆ.

ವಿದ್ಯಾರ್ಥಿನಿ ಜತೆ ಮುಖ್ಯಶಿಕ್ಷಕ ರೊಮಾನ್ಸ್ ಮಾಡುತ್ತಿದ್ದ ವಿಡಿಯೋ ಸಹಿತ ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಕ್ಷಕನ ವಿರುದ್ಧ ದೂರು ಕೊಡಲಾಗಿದೆ. ಬಿಇಓ ಶಾಲೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: