ಕರ್ನಾಟಕಪ್ರಮುಖ ಸುದ್ದಿ

ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡುತ್ತಾರೆ ; ಶಾಸಕ ಯತ್ನಾಳ್ : ಭವಿಷ್ಯ

ರಾಜ್ಯ(ವಿಜಯಪುರ),ಜ.25 : ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡುತ್ತಾರೆ, ಈಗಾಗಲೇ ಅವರು ಹಲವರನ್ನು ಸಂಪರ್ಕ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಇಂದು ವಿಜಯಪುರದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಹಲವು ಸಚಿವರು ಕಾಂಗ್ರೆಸ್ ಗೆ ಹೋಗುತ್ತಿದ್ದಾರೆ, ಹೋಗುವವರು ಹೋಗುತ್ತಾರೆ. ಗುಸು-ಗುಸು, ಪಿಸು ಪಿಸು ಇದ್ದೇ ಇರುತ್ತೇ. ನಮ್ಮಲ್ಲಿ ಕೆಲವರು ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಈಗ ಅವರಿಗೆಲ್ಲಾ ಕಡಿವಾಣ ಹಾಕುವ ಕಾಲ ಬಂದಿದೆ. ಈಗ ಸಲಹೆ ಕೊಡುವ ನಾಯಕರಷ್ಟೇ ಪಕ್ಷದಲ್ಲಿ ಉಳಿದಿದ್ದಾರೆ, ಅಲ್ಲದೇ ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡುತ್ತಾರೆ, ಈಗಾಗಲೇ ಅವರು ಹಲವರನ್ನು ಸಂಪರ್ಕ ಮಾಡಿದ್ದಾರೆ ಎಂದು ಮತ್ತೊಂದು ಭವಿಷ್ಯ ನುಡಿದ್ದಿದ್ದಾರೆ.(ಎಸ್.ಎಂ)

Leave a Reply

comments

Related Articles

error: