ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ನ 16 ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ ; ವರಿಷ್ಠರು ಒಪ್ಪಿದ್ರೆ ಕಾಂಗ್ರೆಸ್ ನವರನ್ನು ಬಿಜೆಪಿಗೆ ಕರೆತರುತ್ತೇನೆ ; ರಮೇಶ್ ಜಾರಕಿಹೊಳಿ

ರಾಜ್ಯ(ಬೆಂಗಳೂರು),ಜ.25 : ಬಿಜೆಪಿಯಿಂದ ಕೆಲ ಶಾಸಕರು ಕಾಂಗ್ರೆಸ್ ಗೆ ಹೋಗುತ್ತಾರೆ ಅನ್ನುವ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ನಾವ್ಯಾರೂ ಕಾಂಗ್ರೆಸ್ ಗೆ ಹೋಗಲ್ಲ, ಅವರೇ ನಮ್ಮ ಕಡೆ ಬರುತ್ತಾರೆ. ಕಾಂಗ್ರೆಸ್ ನ 16 ಮಂದಿ ಇನ್ನೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ 19 ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಕುಮಾರಸ್ವಾಮಿ ಪಕ್ಷದವರನ್ನು ನಾವ್ಯಾರೂ ಟಚ್ ಮಾಡಲ್ಲ, ವರಿಷ್ಠರು ಒಪ್ಪಿದ್ರೆ ಕಾಂಗ್ರೆಸ್ ನವರನ್ನು ಕರೆತರುತ್ತೇನೆ. ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುವುದಿಲ್ಲ, ಮತ್ತೆ ಬೊಮ್ಮಾಯಿ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: