ಮೈಸೂರು

ಮಾಹಿತಿ ಸಂಗ್ರಹಣೆ ಕಾರ್ಯಕ್ರಮದ ಸಮಾರೋಪ

ಮೈಸೂರು, ಜ.25:- ಕರ್ನಾಟಕ ರಾಜ್ಯ ಸಹಕಾರ ಚಳುವಳಿಯ ಮಾತೃ ಸಂಸ್ಥೆಯಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಹಿರಿಯ ಶ್ರೇಷ್ಠ ಸಹಕಾರಿಗಳು ಆದ  ಜಿ.ಟಿ.ದೇವೇಗೌಡ ಅವರ ಬಹುದಿನಗಳ ಕನಸು ನನಸು ಆದ ವಿಶೇಷತೆ ಏನೆಂದರೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ರಾಜ್ಯದಾದ್ಯಂತ ಸಹಕಾರ ಚಳುವಳಿಯನ್ನು ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಸಲುವಾಗಿ ಸಹಕಾರ ಶಿಕ್ಷಣ ತರಬೇತಿ ಪ್ರಚಾರ ಕಾರ್ಯಗಳನ್ನು ನಡೆಸಿ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸುವ ಸಲುವಾಗಿ “ಮಹಾಮಂಡಳದ ನಡಿಗೆ ಸಹಕಾರ ಸಂಘಗಳ ಕಡೆಗೆ” ಎಂಬ ಧ್ಯೇಯ ಉದ್ದೇಶಗಳೊಂದಿಗೆ ರಾಜ್ಯದ ಕಾರ್ಯನಿರತ ಸುಮಾರು 40 ಸಾವಿರ ಸಹಕಾರ ಸಂಘಗಳಿಗೆ  ವಿಶೇಷ ಸಹಕಾರ ವಾರಪತ್ರಿಕೆ, ಡೈರಿ, ಕ್ಯಾಲೆಂಡರ್, ಬ್ರೋಚರ್‌ಗಳನ್ನು ನೀಡುವುದಕ್ಕೆ ಚಾಲನೆ ನೀಡಲಾಗಿತ್ತು.

ನೇರವಾಗಿಯೇ ಸಹಕಾರ ಸಂಘಗಳಿಗೆ ಭೇಟಿ ನೀಡಿ ಎಲ್ಲಾ ಸಹಕಾರ ಸಂಘಗಳ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವನ್ನು ಸಹಕಾರ ಕ್ಷೇತ್ರದ ಮಾಹಿತಿ ಕೇಂದ್ರಗಳನ್ನು ಆಗಿಸುವ ಅತ್ಯಂತ ಪ್ರಮುಖವಾದ ಕೆಲಸವನ್ನು 3.01.2022 ರಿಂದ 25.01.2022  ರವರೆಗೆ ಕೈಗೊಂಡಿದ್ದು ಇದಕ್ಕಾಗಿ ಮೈಸೂರು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಮೈಸೂರು ಜಿಲ್ಲೆಯಲ್ಲಿರುವ ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡುವುದರ ಮೂಲಕ ಯಶಸ್ವಿ ಕಾರ್ಯ ನಿರ್ವಹಿಸುತ್ತಾರೆ.

ಇದರ ಅಂತಿಮ ಭಾಗವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಮೈಸೂರು ಇದರ  ಅಧ್ಯಕ್ಷರು ಆದ  ಜಿ.ಡಿ.ಹರೀಶ್‌ಗೌಡ ಅವರು ಇದರ ಸಮಾರೋಪ ಕಾರ್ಯಕ್ರಮವನ್ನು ನೆರವೇರಿಸಿದರು.

Leave a Reply

comments

Related Articles

error: