ಮೈಸೂರು

ಹಿರಿಯ ವ್ಯಾಪಾರಸ್ಥರಿಗೆ ಗೌರವ ಸಮರ್ಪಣೆ-ಕೊರೋನ ಲಸಿಕೆ ಅಭಿಯಾನ

ಮೈಸೂರು,ಜ.27:- ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಿರಿಯ ವ್ಯಾಪಾರಸ್ಥರಿಗೆ ಗೌರವ ಸಮರ್ಪಣೆ ಮತ್ತು ಕೊರೋನ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಕನ್ನಿಕ ಮಹಲ್ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಹಿರಿಯ ವ್ಯಾಪಾರಸ್ಥರಿಗೆ ಗೌರವ ಸಮರ್ಪಣೆ ಮತ್ತು ಕೊರೋನ ಲಸಿಕೆ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಹಿರಿಯ ವ್ಯಾಪಾರಸ್ಥರಾದ ಚೆಲುವಚಾರ್ ,ಶಿವಲಿಂಗು ,ವಿಶ್ವನಾಥ್ ಶೆಟ್ಟಿ ,ಡಿ ಎಸ್ ಗೌತಮ್ ಚಂದ್ ,ಪ್ರತಾಪ್ ಸಿಂಗ್ ,ಸ್ವಾಮಿನಾಥನ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಡಿಜಿಟಲ್ ಇಂಡಿಯಾದಂತಹ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕನ್ನು ಕಟ್ಟುವ ಕಾರ್ಯ ನಡೆಸಿ ಯಶಸ್ವಿಯಾಗಿದೆ. ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯವನ್ನು ಮೇಲಕ್ಕೆ ಏರಿಸುವ ಯೋಜನೆ ರೂಪಿಸಿದೆ ಎಂದರು.
ಶಾಸಕ ಎಲ್ ನಾಗೇಂದ್ರ ಮಾತನಾಡಿ ನಮ್ಮ ದೇಶ ಅನೇಕ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ಭವ್ಯ ಮತ್ತು ಸು೦ದರ ದೇಶವಾಗಿದ್ದು, ಯುವಪೀಳಿಗೆ ಇದರ ಆಶಯದಂತೆ ನಡೆದುಕೊಳ್ಳುವ ಮೂಲಕ ಭಾರತ ದೇಶವನ್ನು ಸದೃಢ ಹಾಗೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮುಂದಾಗಬೇಕೆಂದು ಹೇಳಿದರು.
ದೇಶದಲ್ಲಿ ಸುಮಾರು 1750 ಭಾಷೆಗಳು, 25 ಕ್ಕೂ ಹೆಚ್ಚು ಧರ್ಮಗಳು, ಸಾವಿರಾರು ಹಬ್ಬ ಆಚರಣೆಗಳು ಅಡಗಿರುವ ಸುಸ೦ಸ್ಕೃತ ದೇಶ ನಮ್ಮದಾಗಿದ್ದು ಕಾನೂನು ಒಂದೇ. ಭಯೋತ್ಪಾದನೆ ದೇಶಕ್ಕೆ ಮಾರಕವಾಗಿದ್ದು, ಪ್ರತಿಯೊಬ್ಬರೂ ದೇಶಕ್ಕಾಗಿ ಹೋರಾಡಬೇಕು ಎಂದರು.
1950ರಲ್ಲಿ ಗಣರಾಜ್ಯವಾಗಿ ಆ ಮೂಲಕ ಸಂವಿಧಾನವನ್ನು ದೇಶಕ್ಕೆ ಕೊಟ್ಟಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನ ರಕ್ಷಣೆ, ಬಲ ನೀಡಿದ್ದು ವಾಕ್ ಸ್ವಾತಂತ್ರ್ಯ ನೀಡಿದೆ. ಕೋವಿಡ್ ಎಂಬ ಮಹಾಮಾರಿಯನ್ನು ದೇಶದ
ಜನರು ಒಗ್ಗಟ್ಟಾಗಿ ಎದುರಿಸಲು ಹೋರಾಡಲು ಮುಂದಾಗೋಣ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸಹ ಸಂಚಾಲಕರಾದ ಪ್ರಕಾಶ್ ಮಂಥೊಡೂ , ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರುಗಳಾದ ವಿದ್ಯಾ ಅರಸು ಮತ್ತು ಮೈಸೂರು ನಗರ ಸಂಚಾಲಕರಾದ ಅಪೂರ್ವ ಸುರೇಶ್ ಮತ್ತು ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ ರಾಜ್, ಪ್ರಧಾನ ಕಾರ್ಯದರ್ಶಿ ಗಿರಿಧರ್,
ಆರ್. ಪರಮೇಶ್, ಸಹ ಸಂಚಾಲಕರು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬಿಜೆಪಿ ಮೈಸೂರು ನಗರ ಅನೂಜ್ ,ರಮೇಶ್ ಕುಮಾರ್, ಶ್ರೀನಿವಾಸ್ ಕ್ಷೇತ್ರದ ಮುಖಂಡರು ಹಾಗೂ ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: