ಕರ್ನಾಟಕಮೈಸೂರು

ಕರಕುಶಲ ಕಲೆಗಳಲ್ಲಿ ಮಹಿಳೆಯರು ಮುಂದು: ಸಚಿವ ತನ್ವೀರ್‍ ಸೇಠ್‍

ಮಹಿಳೆ ಎಂದರೆ ಕೇವಲ ಭೋಗದ ವಸ್ತು, ಅಡುಗೆ ಮನೆಗೆ ಸೀಮಿತ, ಪುರುಷನ ಅವಲಂಬನೆ ಇಲ್ಲದೆ ಬದುಕಲಾರಳು ಎಂಬ ಮಾತು ಎಂದೋ ಮುಗಿದಿದ್ದು, ನಗರದ ಜೆ.ಕೆ. ಮೈದಾನದಲ್ಲಿ ದಸರಾ ಅಂಗವಾಗಿ ಆಯೋಜಿಸಿರುವ ಮಹಿಳಾ ದಸರಾ ಮಹಿಳೆಯರ ಶಕ್ತಿಯನ್ನು ತೋರ್ಪಡಿಸುತ್ತಿದೆ ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.

ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಮಾಜದಲ್ಲಿ ಮಹಿಳೆಯರು ಅವಲಂಬನೆಯಿಲ್ಲದೆ ಬದುಕಬಲ್ಲರು. ಕರಕುಶಲ ಕಲೆ ಹಾಗೂ ನೈಪುಣ್ಯ ಬೇಡುವ ವಿಷಯಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ಈ ಬಾರಿಯ ಮಹಿಳಾ ದಸರಾದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.

ಮಹಿಳಾ ದಸರಾದಲ್ಲಿ ಸ್ವತಃ ಮಹಿಳೆಯರೇ ತಮ್ಮ ಕೈಯ್ಯಾರೆ ಸಿದ್ಧಪಡಿಸಿರುವ ದೇವರ ವಿಗ್ರಹಗಳು, ಮಣ್ಣಿನ ಹೂಕುಂದಗಳು, ಬಿದಿರಿನ ಬುಟ್ಟಿಗಳು ಜನರ ಮೆಚ್ಚುಗೆಗೆ ಪಾತ್ರವಾದವು. ಎಲ್ಲೆಲ್ಲೂ ಪ್ಲಾಸ್ಟಿಕ್‌ ಪದಾರ್ಥಗಳೇ ಹೆಚ್ಚುತ್ತಿರುವಾಗ ಇಂತಹ ಪರಿಸರ ಸ್ನೇಹಿ ವಸ್ತುಗಳನ್ನು ಪುನಃ ಪರಿಚಯಿಸುತ್ತಿದ್ದಾರೆ ನಮ್ಮ ಗ್ರಾಮೀಣ ಮಹಿಳೆಯರು. ನೇಯ್ಗೆಯ ಸೀರೆಗಳು ವಿಶೇಷವಾಗಿದ್ದು ಪಾಲಿಕಾಟನ್, ಕಾಟನ್ ಪ್ರಿಂಟ್, ಕಾಟನ್ ಸಿಲ್ಕ್, ನೆಟ್-ಕಾಟನ್ ಮುಂತಾದ ಸೀರೆಗಳು ಹಾಗೂ ಡ್ರೆಸ್ ಪೀಸ್‌ಗಳು ಮಳಿಗೆಗಳಲ್ಲಿ ಲಭ್ಯವಿವೆ. ಜೊತೆಗೆ ಗುಜರಾತಿನ ಲಂಬಾಣಿ ಉಡುಪುಗಳು, ಉಲ್ಲನ್ ಸ್ವೆಟರ್, ಮಕ್ಕಳಿಗಾಗಿ ಮರದಿಂದ ತಯಾರಿಸಿದ ಆಟಿಕೆಗಳು ದೊರೆಯಲಿವೆ.

ಕಾರ್ಯಕ್ರಮದಲ್ಲಿ ಮಹಿಳಾ ಅಯೋಗದ ಅಧ್ಯಕ್ಷೆ ಮಂಜುಳ ಮಾನಸ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

comments

Related Articles

error: