
ಪ್ರಮುಖ ಸುದ್ದಿಮನರಂಜನೆಮೈಸೂರು
ಶಕ್ತಿಧಾಮದ ಮಕ್ಕಳೊಂದಿಗೆ ನಟ ಶಿವರಾಜ್ ಕುಮಾರ್ ಗಣರಾಜ್ಯೋತ್ಸವ ಆಚರಣೆ
ಮೈಸೂರು,ಜ.27:- ಶಕ್ತಿಧಾಮದ ಮಕ್ಕಳೊಂದಿಗೆ ಚಂದನವನದ ನಟ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಡೆಸುತ್ತಿದ್ದ ಶಕ್ತಿಧಾಮದ ಹೊಣೆಯನ್ನು ಇದೀಗ ಶಿವರಾಜ್ ಕುಮಾರ್ ಹೊತ್ತಿದ್ದಾರೆ. ಗಣ ರಾಜ್ಯೋತ್ಸವ ಆಚರಿಸಿದ ಬಳಿಕ ಮಕ್ಕಳ ಜೊತೆ ಬಸ್ ನಲ್ಲಿಯೇ ಶಕ್ತಿಧಾಮ ಸುತ್ತಿದ ಶಿವರಾಜ್ ಕುಮಾರ್ ಮಕ್ಕಳನ್ನು ಕೂರಿಸಿಕೊಂಡು ಸ್ವತಃ ತಾವೇ ಬಸ್ ಚಲಾಯಿಸಿದ್ದಾರೆ. ಮಕ್ಕಳು ಇದರಿಂದ ಸಂತಸಪಟ್ಟಿದ್ದಾರೆ.
ಶಿವರಾಜ್ ಕುಮಾರ್ ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಡ್ರೈವ್ ಮಾಡುತ್ತಿರುವ ವಿಡಿಯೋ ಸುಂದರವಾಗಿ ಮೂಡಿಬಂದಿದೆ. ಪುಟ್ಟ ಮಕ್ಕಳು ಶಿವರಾಜ್ ಕುಮಾರ್ ಚಾಲಕನಾದ ಬಸ್ ನಲ್ಲಿ ಪ್ರಯಾಣಿಸಿ ಸಂಭ್ರಮಿಸಿದ್ದಾರೆ. ಬಡ ಹೆಣ್ಣುಮಕ್ಕಳಿಗಾಗಿ ಸ್ಯಾಂಡಲ್ವುಡ್ ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ ಶಕ್ತಿಧಾಮ ಮೈಸೂರಿನಲ್ಲಿದ್ದು ಅಲ್ಲಿ ಬಡ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.