ಮೈಸೂರು

ಅ.ನ.ಕೃ ನೇರ ಹಾಗೂ ನಿಷ್ಠುರವಾದಿ : ಪ್ರೋ.ನಂಜರಾಜೇ ಅರಸ್ ಬಣ್ಣನೆ

ಮೈಸೂರು, ಮೇ.9:- ಕನ್ನಡದ ಕಟ್ಟಾಳು, ಚಿಂತಕ ಬರಹಗಾರ ಅನಕೃ ಅವರ 109ನೇ ಜಯಂತಿಯನ್ನು ಮೈಸೂರು ಕನ್ನಡ ವೇದಿಕೆ ವತಿಯಿಂದ ವಿನೂತನವಾಗಿ ಆಚರಿಸಲಾಯಿತು.

ಮೈಸೂರಿನ ವಿಶ್ವಮಾನವ ಉದ್ಯಾನವನದಲ್ಲಿ ನಡೆದ ಜಯಂತಿ ಕಾರ್ಯಕ್ರಮವನ್ನು ಸಸಿನೆಟ್ಟು ಅದಕ್ಕೆ ನೀರುಣಿಸುವ ಮೂಲಕ  ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಉದ್ಘಾಟಿಸಿದರು. ಈ ಸಂದರ್ಭ ಉಪಸ್ಥಿತರಿದ್ದ ಚಿಂತಕ ಪ್ರೋ.ನಂಜರಾಜೇ ಅರಸ್ ಮಾತನಾಡಿ ಅಖಂಡ ಕರ್ನಾಟಕ ಕಟ್ಟುವ ಸಲುವಾಗಿ ಅವಿರತ ಪ್ರಯತ್ನ ಪಟ್ಟಂತಹ ಅ.ನ.ಕೃ ನೇರ ಹಾಗೂ ನಿಷ್ಠುರವಾದಿಯಾಗಿದ್ದರು. ಕನ್ನಡ ನಾಡಿನ ಭಾಷೆಯ ಹಿತಕ್ಕಾಗಿ ಎಂದೂ ರಾಜಿಯಾಗಲಿಲ್ಲ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಬನ್ನೂರು ಕೆ.ರಾಜು, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಸಮಾಜಸೇವಕ ರಘುರಾಂ ವಾಜಪೇಯಿ, ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ ಮತ್ತಿತರರು ಉಪಸ್ಥಿತರಿದ್ದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: