ಮೈಸೂರು

ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ದ.ರಾ.ಬೇಂದ್ರೆಯವರ ಜನ್ಮದಿನೋತ್ಸವ ಆಚರಣೆ

ಮೈಸೂರು, ಜ.31:- ನವೋದಯ ಕಾವ್ಯ ಪಂಥವನ್ನು ರೂಢಿಸಿ ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧರಾದ ಮತ್ತು ಕರ್ನಾಟಕದಲ್ಲಿ ಸಾಹಿತ್ಯಿಕ – ಸಾಂಸ್ಕøತಿಕ ಅಭಿವೃದ್ಧಿಗೆ ಶ್ರಮಿಸಿದ ವಾತಾವರಣವನ್ನು ಹುಟ್ಟುಹಾಕಿ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮೇರುಕವಿ ದ.ರಾ.ಬೇಂದ್ರೆಯವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಇಂದು ಆಯೋಜಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ  ಎಚ್. ಸತ್ಯಪ್ರಸಾದ್ ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬೇಂದ್ರೆಯವರ ಬದುಕುಬರಹವನ್ನು ಕುರಿತು ಮಾತನಾಡಿ “ದ.ರಾ.ಬೇಂದ್ರೆಯವರು ಕನ್ನಡ ಸಾರಸ್ವತ ಲೋಕ ಕಂಡ ಶ್ರೇಷ್ಠ ಕವಿ. ಸರಳ ಜನಪದ ವಚನಶೈಲಿಯ ಕಾವ್ಯ, ಸಾಹಿತ್ಯ ರಚನೆಗೆ ಮುನ್ನುಡಿ ಬರೆದವರು. ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಇವರು ನಮ್ಮ ನಾಡು-ನುಡಿಯ ಸಂಸ್ಕøತಿಯ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ದ.ರಾ.ಬೇಂದ್ರೆಯವರು ಹೊಸಗನ್ನಡ ಭಾವಗೀತೆಯ ಮೂಲ ಪ್ರವರ್ತಕರಲ್ಲಿ ಒಬ್ಬರು. ಆದ್ದರಿಂದಲೇ ಇವರನ್ನು ಯುಗದ ಕವಿ, ಜಗದಕವಿ ಎಂದು ಕರೆಯಲಾಗಿದೆ. ಬದುಕಿದಷ್ಟು ಕಾಲ ತಮ್ಮನ್ನು ದೇಶ, ಭಾಷೆ, ಸಂಸ್ಕøತಿಯ ಕುರಿತ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ‘ನಾಕುತಂತಿ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಬೇಂದ್ರೆಯವರ ಹಾಡುಗಳು ಗೇಯಗುಣ ಸಂಪನ್ನವಾಗಿದ್ದು ಸುಮಧುರವಾಗಿರುತ್ತವೆ. ಸಾಧಾರಣವಾದ ಪದರಚನೆಯ ಮೂಲಕ ಸುಲಭವಾಗಿ ಅರ್ಥೈಸಿಕೊಳ್ಳುವ ಭಾವನಾತ್ಮಕ ಕಾವ್ಯ ರಚನೆಗೆ ಬೇಂದ್ರೆಯವರು ಹೆಸರಾಗಿದ್ದಾರೆ. ಅವರು ಕನ್ನಡ ಸಾಹಿತ್ಯದೊಂದಿಗೆ ಸಂಸ್ಕøತ, ಮರಾಠಿ ಭಾಷೆಗಳಲ್ಲೂ ಪರಿಣಿತಿ ಹೊಂದಿದ್ದರು. ಆಧ್ಯಾತ್ಮದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಬೇಂದ್ರೆಯವರು ಕಾಳಿದಾಸನ ಸಂಸ್ಕøತ ‘ಮೇಘದೂತ’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ಮಹರ್ಷಿ ಅರವಿಂದರ ಸಂದೇಶಗಳಿಂದ ಸ್ಫೂರ್ತಿ ಪಡೆದಿದ್ದರು. ಜೀವನ ಮೌಲ್ಯಗಳು ಹಾಗೂ ಸಾಮಾಜಿಕ ದೃಷ್ಟಿಕೋನ ಅವರ ಕೃತಿಗಳಲ್ಲಿ ವ್ಯಕ್ತವಾಗಿದೆ. ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲೂ ಅಪಾರ ಜ್ಞಾನ ಹೊಂದಿದ್ದರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ  ಎಸ್.ಎಸ್. ರಮೇಶ್, ಕೆ.ಎಸ್. ಪ್ರದೀಪ್,  ಮಯೂರಲಕ್ಷ್ಮಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

 

Leave a Reply

comments

Related Articles

error: