ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾವೇರಿ ಬಿಸಿ: ತಮಿಳು ಚಿತ್ರಪ್ರದರ್ಶನಕ್ಕೆ ರೈತರಿಂದ ಅಡ್ಡಿ

ಕಾವೇರಿ ನೀರಿಗಾಗಿ ಆಗ್ರಹಿಸಿ ತಮಿಳು ನಾಡು ಬಂದ್ ಗೆ ಕರೆ ನೀಡಿರುವುದನ್ನು ಖಂಡಿಸಿ ರೈತರು ಮೈಸೂರಿನಲ್ಲಿ ತಮಿಳು ಚಿತ್ರ ಪ್ರದರ್ಶನವನ್ನು ಬಂದ್ ಮಾಡಿಸಿ ಮಂಗಳವಾರ ಪ್ರತಿಭಟಿಸಿದರು.
ಮೈಸೂರಿನ ಅಗ್ರಹಾರದಲ್ಲಿರುವ ಪದ್ಮ ಚಲನಚಿತ್ರ ಮಂದಿರದಲ್ಲಿ ಇಂದು ಬೆಳಿಗ್ಗೆ ‘ಭಯಂ ಒರು ಪಯಣಂ’ ತಮಿಳು ಚಿತ್ರ ಪ್ರದರ್ಶನಗೊಳುತ್ತಿದ್ದ ವೇಳೆ ನುಗ್ಗಿದ ರೈತರು ಗೇಟ್ ಕಿತ್ತು , ಚಿತ್ರದ ಪೋಸ್ಟರ್ ಹರಿದು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಮಾಲೀಕರ ವಿರುದ್ಧ ಪ್ರತಿಭಟಿಸಿದ್ದಾರೆ. ಕಾವೇರಿ ಕಣಿವೆ ಪ್ರದೇಶದಲ್ಲಿ ಪ್ರಸಕ್ತ ವರ್ಷ ಸರಿಯಾದ ಮಳೆ ಬೀಳದ ಕಾರಣ ಜಲಾಶಯದಲ್ಲಿ ಕನಿಷ್ಠ ಮಟ್ಟದ ನೀರಿದೆ. ಆದ್ದರಿಂದ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲವೆಂದು ರಾಜ್ಯ ಸರ್ಕಾರ ತಿಳಿಸಿದ್ದರ ವಿರುದ್ಧ ತಮಿಳುನಾಡು ಬಂದ್‍ ಅಚರಿಸುತ್ತಿರುವುದನ್ನು ರೈತರು ಖಂಡಿಸಿದರು.

HAM_9042

Leave a Reply

comments

Related Articles

error: