
ಮೈಸೂರು,ಫೆ.3 :- ಮೈಸೂರು ಜಿಲ್ಲೆಯಲ್ಲಿ ಬುಧವಾರ 1,209 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1,457 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 2,23,956 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 2,13,313 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 8,123 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 2,507 ಮಂದಿ ಸಾವನ್ನಪ್ಪಿದ್ದಾರೆ. 374 ಮಂದಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7,760 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.
ಜಿಲ್ಲೆಯಲ್ಲಿ 1-5 ವರ್ಷದೊಳಗಿನ ಮಕ್ಕಳು 10, 6-10 ವರ್ಷದೊಳಗಿನ ಮಕ್ಕಳು 7, 11-17 ವರ್ಷದೊಳಗಿನ ಮಕ್ಕಳು 73 ಸೇರಿದಂತೆ 90 ಮಂದಿ ಮಕ್ಕಳಿಗೆ ಸೋಂಕು ತಗುಲಿದೆ. ಜಿಲ್ಲೆಯ ಹೆಚ್.ಡಿ.ಕೋಟೆ 14, ಹುಣಸೂರು 45, ಕೆ.ಆರ್.ನಗರ 75, ಮೈಸೂರು ನಗರ 493, ಮೈಸೂರು ತಾಲೂಕು 56, ನಂಜನಗೂಡು 28, ಪಿರಿಯಾಪಟ್ಟಣ 31, ಸಾಲಿಗ್ರಾಮ 16, ಸರಗೂರು 2, ತಿ.ನರಸೀಪುರ 17 ಪ್ರಕರಣ ಸೇರಿದಂತೆ ಒಟ್ಟು 1,209 ಪ್ರಕರಣ ಕಾಣಿಸಿಕೊಂಡಿದೆ.(ಎಸ್.ಎಂ)