ಮೈಸೂರು

ಭೋವಿ ನಿಗಮದ ಅಧ್ಯಕ್ಷರಾಗಿ ಜಿ.ವಿ. ಸೀತಾರಾಂ ನೇಮಕ

ಮೈಸೂರು, ಮೇ ೯: ಜಿಲ್ಲೆಯ ಭೋವಿ ಸಮಾಜದ ಮುಖಂಡ ಜಿ.ವಿ. ಸೀತಾರಾಂ ಅವರನ್ನು ಕರ್ನಾಟಕ ರಾಜ್ಯ ಭೋವಿ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಈ ಹುದ್ದೆಗೆ ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ ಅವರನ್ನು ನೇಮಿಸಲಾಗಿತ್ತು. ಆದರೆ ಅವರು ಹುದ್ದೆ ನಿರಾಕರಿಸಿದ್ದರಿಂದ ಆ ಹುದ್ದೆಗೆ ಸೀತಾರಾಂ ಅವರನ್ನು ನೇಮಿಸಲಾಗಿದೆ.

ಸೀತಾರಾಂ ಹಾಲಿ ನಿಗಮದ ನಿರ್ದೇಶಕರಾಗಿದ್ದರು. ಬೋವಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಸೀತಾರಾಂರವರನ್ನು ಡೈರಿ ಮಾಜಿ ಅಧ್ಯಕ್ಷ ಉಮಾಶಂಕರ್, ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಹಿನಕಲ್ ಪ್ರಕಾಶ್, ಅಹಿಂದ ಉಪಾಧ್ಯಕ್ಷ ನಜ಼ರ್‌ಬಾದ್ ನಟರಾಜ್, ಹೌಸಿಂಗ್ ಬೋರ್ಡ್ ನಿರ್ದೇಶಕ ಆನಂದೂರು ರಾಮೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಯ್ಯ ಹಾಗೂ ಲಿಂಗಾಂಬುದಿ ಪಾಳ್ಯದ ಗ್ರಾಮಸ್ಥರು ಅಭಿನಂದಿಸಿದರು. (ಬಿ.ಎಂ)

 

Leave a Reply

comments

Related Articles

error: