ನಮ್ಮೂರುಮೈಸೂರು

‘ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ’ವನ್ನು ನಿರ್ಮಾಣ ಮಾಡುವಂತೆ ಒತ್ತಾಯ

ಮೈಸೂರು.ಫೆ.3 :- ‘ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ’ವನ್ನು ನಿರ್ಮಾಣ ಮಾಡುವಂತೆ ಮತ್ತು ಮತ್ತಿತರ ಬೇಡಿಕೆಗಳನ್ನು ಈಡೇರಿಸಿವಂತೆ ರಾಜ್ಯ ಒಕ್ಕಲಿಗರ ಸಂಘ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.

ಇಂದು ಮೈಸೂರು  ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್  ಮಾತನಾಡಿ, ಒಕ್ಕಲಿಗರ ಸಮುದಾಯವು ಕರ್ನಾಟಕ ರಾಜ್ಯದ ಒಂದು ಬಹು ದೊಡ್ಡ ಸಮುದಾಯ. ಈ ಸಮುದಾಯದ ಮೂಲ ಕಸುಬು ಬೇಸಾಯ. ಹೀಗಿರುವಾಗ ಪ್ರಧಾನವಾಗಿ ಕೃಷಿಯನ್ನೇ ನಂಬಿಕೊಂಡಿರುವ ಈ ಒಕ್ಕಲಿಗ ಸಮುದಾಯದ ಹಿತ ಕಾಪಾಡಲಿಕ್ಕಾಗಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ ವರ್ಷದ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ‘ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತದೆಯೆಂದು ಪ್ರಸ್ತಾಪಿಸಿದರು. ಆಗ ಸಹಜವಾಗಿಯೇ ನಮ್ಮ ಸಮುದಾಯ ಸಂತೋಷಪಟ್ಟಿತು. ಇಂಥದೊಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಕ್ಕಾಗಿ ಈಗಲೂ ನಮ್ಮ ಸಮುದಾಯದ ಪರವಾಗಿ ಯಡಿಯೂರಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು.

ಆದರೆ ಈ ಪ್ರಾಧಿಕಾರ ವರ್ಷ ಕಳೆದರೂ ಇನ್ನೂ ಅಧಿಕೃತವಾಗಿ ಆರಂಭಗೊಂಡೇ ಇಲ್ಲ. ಸರ್ಕಾರ, ಅದಕ್ಕೊಬ್ಬರು ಅಧ್ಯಕ್ಷರು ಮತ್ತು ಮೂರ್ನಾಲ್ಕು ಜನ ಸದಸ್ಯರನ್ನು ನಾಮಕರಣ ಮಾಡಿದೆ  ಅನ್ನುವುದನ್ನು ಬಿಟ್ಟರೆ ಪ್ರಾಧಿಕಾರ ಯಾವ ಗಂಭೀರವಾದ ಕೆಲಸವನ್ನು ಆರಂಭಿಸಿಯೇ ಇಲ್ಲ ಎಂದು ಬೇಸರ  ವ್ಯಕ್ತಪಡಿಸಿದರು.

ಈ ಅಸಮಾಧಾನವು ಇನ್ನಷ್ಟು ಅಧಿಕವಾಗಿ ಸರ್ಕಾರದ ವಿರುದ್ಧ ಧರಣಿ, ಸತ್ಯಾಗ್ರಹ ಮುಂತಾದ ಬೆಳವಣಿಗೆಗಳು ನಡೆಯುವ ಮೊದಲೇ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಈ ಕಡೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಗಂಗಾಧರ್, ಮರಿಸ್ವಾಮಿ, ಚೇತನ್ ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಂ)

Leave a Reply

comments

Related Articles

error: