ಪ್ರಮುಖ ಸುದ್ದಿ

ನೆಲಕ್ಕುರುಳಿದ ರಾಜ್ಯ ಸರಕಾರದ ಜಾಹೀರಾತು ಫಲಕ

ಪ್ರಮುಖ ಸುದ್ದಿ, ಬೇಲೂರು, ಮೇ 9: ರಾಜ್ಯ ಸರಕಾರದ ಸಾಧನೆಯ ಕುರಿತಾದ ಕೃಷಿ ಇಲಾಖೆಯ ಫಲಕವೊಂದು ನೆಲಕಚ್ಚಿ 15 ದಿನ ಕಳೆದರೂ ಸಹ ಅದರ ದುರಸ್ತಿ ಅಥವಾ ಸ್ಥಳಾಂತರದ ಬಗ್ಗೆ ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳು ಗಮನ ಹರಿಸದಿರುವುದರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಲೂರಿನ ಕೃಷಿ ಇಲಾಖೆಯ ಮುಂಭಾಗ ರೈತರ ಗಮನಕ್ಕೆ ಬರುವಂತೆ ರಾಜ್ಯ ಸರಕಾರ ರೈತರಿಗೆ ಹಲವು ಯೋಜನೆಗಳ ಜಾರಿಗೆ ತಂದಿದ್ದು ಅದರಂತೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ, ಬಯಲು ಸೀಮೆಯ ಬರಪೀಡಿತ ಚಿಕ್ಕಮಗಳೂರು, ಹಾಸನ, ತುಮಕೂರು, ರಾಮನಗರ ಸೇರಿದಂತೆ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಜಾಹೀರಾತು ಫಲಕವು ಫಲಕದ ಸ್ಥಂಭಗಳು ಮುರಿದು ನೆಲಕ್ಕೆ ಉರುಳಿದೆ.

ಫಲಕ ಉರುಳಿ ಹಲವು ದಿನ ಕಳೆದರೂ ಇದರ ಬಗ್ಗೆ ಗಮನ ಏಕೆ ಹರಿಸಿಲ್ಲ ಎಂದು ಅಧಿಕಾರಿಗಳನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಬೇಕಿದೆ. (ಬಿ.ಎಂ)

 

Leave a Reply

comments

Related Articles

error: