ಕರ್ನಾಟಕಮೈಸೂರು

ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದ ವಿವಾಹಿತ ಜೈಲು ಪಾಲು

ರಾಜ್ಯ (ಮಡಿಕೇರಿ) ಮೇ:9:- ತಾನು ಎರಡು ಮಕ್ಕಳ ತಂದೆ ಎಂಬುದನ್ನು ಮರೆತ ಆಟೋಚಾಲಕನೋರ್ವ  ಹೊಲಿಗೆ ತರಬೇತಿಗೆ ಬರುತ್ತಿದ್ದ ಅಪ್ರಾಪ್ತೆ ಯುವತಿಯನ್ನು ಪುಸಲಾಯಿಸಿ ಕರೆದೊಯ್ದು ಸರಸವಾಡಲು ಮುಂದಾದಾಗ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಪಾಲಾದ ಘಟನೆ ನಡೆದಿದೆ.

ಬಂಧಿತನನ್ನು ಮಡಿಕೇರಿ  ತ್ಯಾಗರಾಜ ಕಾಲೋನಿ ನಿವಾಸಿ, ಮಹಮ್ಮದ್ ಗೌಸ್ ಎಂಬವರ ಪುತ್ರ ವಾಝಿದ್  ಎಂದು ಗುರುತಿಸಲಾಗಿದೆ.  ಈತ ಹೆಬ್ಬೆಟ್ಟಗೇರಿಯ ಪರಿಶಿಷ್ಟ ಕುಟುಂಬವೊಂದರ ಹದಿನೇಳರ ವರ್ಷದ ಯುವತಿಯನ್ನು ಪುಸಲಾಯಿಸಿ  ತನ್ನ ಆಟೋ ರಿಕ್ಷಾದಲ್ಲಿ (ಕೆ.ಎ. 12 ಬಿ. 4304) ಸುಳ್ಯಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಹುಡುಗಿಯನ್ನು ನಿಲ್ಲಿಸಿ  ಆಚೆ ಈಚೆ ತಿರುಗುತ್ತಿದ್ದಾಗ ಅವನ ವರ್ತನೆಯನ್ನು ಗಮನಿಸಿದ ಸಾರ್ವಜನಿಕರು ಸಂಶಯಗೊಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಾರ್ಯ ಪ್ರವೃತ್ತರಾದ ಸುಳ್ಯ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ,  ಸ್ಥಳಕ್ಕೆ ಬಂದು ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಉದ್ದೇಶ ಬಯಲಾಗಿದೆ.ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸಿದ ಪೊಲೀಸರು, ಆಟೋ ಚಾಲಕನನ್ನು `ಪೋಕ್ಸೊ’ ಕಾಯ್ದೆಯಡಿ ವಶಕ್ಕೆ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: