ಕರ್ನಾಟಕದೇಶಮೈಸೂರು

ಜಯಾ ಆರೋಗ್ಯ ಸ್ಥಿರವಾಗಿದೆ ಎಂದ ರಾಜಭವನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಚೆನ್ನೈ ರಾಜಭವನದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಆರೋಗ್ಯದ ಕುರಿತು ತಮಿಳುನಾಡಿನಾದ್ಯಂತ ಹಲವಾರು ವದಂತಿಗಳು ಹಬ್ಬಿದ್ದರಿಂದಾಗಿ ರಾಜ್ಯಪಾಲರು ವೈದ್ಯರಿಂದ ಮಾಹಿತಿ ಪಡೆದಿದ್ದು, ಜಯಾ “ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ” ಸ್ಪಷ್ಟನೆ ವೈದ್ಯರಿಂದ ಬಂದಿದೆ. ಇದರಿಂದಾಗಿ ಜನತೆ ವದಂತಿಗಳಿಗೆ ಕಿವಿಗೊಡಬಾರದು ಎಂದು ರಾಜಭವನ ಪ್ರಕಟಣೆ ತಿಳಿಸಿದೆ.

ತಮಿಳುನಾಡಿನಾದ್ಯಂತ ಪೊಲೀಸ್‍ ಭದ್ರತೆ ಹೆಚ್ಚಳ: ರಾಜಭವನದಿಂದ ಜಯಾ ಆರೋಗ್ಯದ ಕುರಿತು ಪ್ರಕಟಣೆ ಹೊರಬಿದ್ದಿದ್ದರೂ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಿದ್ದಾರೆ.

Leave a Reply

comments

Related Articles

error: