ನಮ್ಮೂರುಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಇಳಿಮುಖ

ಮೈಸೂರು,ಫೆ.7 : – ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಕುಸಿಯುತ್ತಿದ್ದು, ಭಾನುವಾರ 582 ಮಂದಿಗೆ ಸೋಂಕು ತಗುಲಿದೆ. 515 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 2,26,951 ಮಂದಿಗೆ ಸೋಂಕು ತಗುಲಿದ್ದು, 2,19,483 ಮಂದಿ ಗುಣಮುಖರಾಗಿದ್ದಾರೆ, ಪ್ರಸ್ತುತ 4,939 ಸಕ್ರಿಯ ಪ್ರಕರಣಗಳಿವೆ.  ಮೂರು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇದುವರೆಗೆ 2,529 ಮಂದಿ ಸಾವನ್ನಪ್ಪಿದ್ದಾರೆ.  4224 ಮಂದಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ.

1-5 ವರ್ಷದೊಳಗಿನ ಮಕ್ಕಳು 5, 6-10 ವರ್ಷದೊಳಗಿನ ಮಕ್ಕಳು 53, 11-17 ವರ್ಷದೊಳಗಿನ ಮಕ್ಕಳು 160 ಸೇರಿದಂತೆ ಒಟ್ಟು 218 ಮಂದಿ ಮಕ್ಕಳಿಗೆ ಸೋಂಕು ತಗುಲಿದೆ. ಹೆಚ್.ಡಿ.ಕೋಟೆ 15, ಹುಣಸೂರು 25, ಕೆ.ಆರ್.ನಗರ 56, ಮೈಸೂರು ನಗರ 247, ಮೈಸೂರು ತಾಲೂಕು 21, ನಂಜನಗೂಡು 27, ಸಾಲಿಗ್ರಾಮ 8, ಸರಗೂರು 1, ತಿ.ನರಸೀಪುರ 30 ಮಂದಿ ಸೇರಿದಂತೆ ಒಟ್ಟು 582 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ 240 ಮಂದಿ ವೈದ್ಯರ ಸಲಹೆ ಮೇರೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 4,699 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.(ಎಸ್.ಎಂ)

Leave a Reply

comments

Related Articles

error: