ದೇಶಪ್ರಮುಖ ಸುದ್ದಿ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 83876 ಹೊಸ ಕೊರೋನಾ ಪ್ರಕರಣ ಪತ್ತೆ

ದೇಶ(ನವದೆಹಲಿ),ಫೆ.7:- ಇದೀಗ ದೇಶದಲ್ಲಿ ಕೊರೊನಾ ಸೋಂಕಿನ ವೇಗ ಕಡಿಮೆಯಾಗಿದೆ. ಸುಮಾರು ಒಂದು ತಿಂಗಳ ನಂತರ ಮೊದಲ ಬಾರಿಗೆ ಇಂದು ಹೊಸ ಕೊರೋನಾ ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆ ಬಂದಿವೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 83 ಸಾವಿರದ 876 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಈ ಅವಧಿಯಲ್ಲಿ 895 ಜನರು ಸಾವನ್ನಪ್ಪಿದ್ದಾರೆ. ಆದರೆ 1 ಲಕ್ಷದ 99 ಸಾವಿರದ 54 ಜನರು ಗುಣಮುಖರಾಗಿದ್ದಾರೆ. ಇದರೊಂದಿಗೆ ಕೊರೋನಾ ಪಾಸಿಟಿವಿಟಿ ದರವು ಈಗ ಶೇಕಡಾ 7.25 ಕ್ಕೆ ಇಳಿದಿದೆ. ಇದಕ್ಕೂ ಮುನ್ನ ಭಾನುವಾರ 1 ಲಕ್ಷದ 7 ಸಾವಿರದ 474 ಹೊಸ ಕೊರೋನಾ ಪ್ರಕರಣಗಳಿದ್ದು, 865 ಜನರು ಸಾವನ್ನಪ್ಪಿದ್ದಾರೆ.
ಹೊಸ ಕೊರೋನಾ ಪ್ರಕರಣಗಳ ನಂತರ, ಈಗ ದೇಶದಲ್ಲಿ ಒಟ್ಟು ಸಕ್ರಿಯ ರೋಗಿಗಳ ಸಂಖ್ಯೆ 11 ಲಕ್ಷ 8 ಸಾವಿರದ 938 ಕ್ಕೆ ಏರಿದೆ. ಆದರೆ ಇದುವರೆಗೆ ಈ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಒಟ್ಟು 5 ಲಕ್ಷ 2 ಸಾವಿರದ 874 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೆಡೆ ಹೊಸ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಇದುವರೆಗೆ 169 ಕೋಟಿ ವ್ಯಾಕ್ಸಿನೇಷನ್ ಮಾಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: