ಸುದ್ದಿ ಸಂಕ್ಷಿಪ್ತ
‘ಮೇ.10ಕ್ಕೆ’ ಬುದ್ಧ ಪೂರ್ಣಿಮೆ ಹಾಗೂ ಸರಳ ವಿವಾಹ
ಮೈಸೂರು.ಮೇ.9 : ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ ಬುದ್ಧ ಪೂರ್ಣಿಮೆ ಹಾಗೂ ಸರಳ ವಿವಾಹ ಸಮಾರಂಭವನ್ನು ಮೇ.10ರಂದು ಬೆಳಿಗ್ಗೆ 10.30ಕ್ಕೆ ಹೋಟೆಲ್ ಗೋವರ್ಧನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವೈದ್ಯಕೀಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ ಉದ್ಘಾಟಿಸುವರು, ವೇದಿಕೆಯ ಗೌರವಾಧ್ಯಕ್ಷ ಹೆಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಿ.ಬಸವೇಗೌಡ, ರಘುರಾಮಯ್ಯ, ಜೆ.ಬಿ.ರಂಗಸ್ವಾಮಿ, ವೆಂಕಟೇಶ್ ಹಾಗೂ ಸಾಹಿತಿ ಬನ್ನೂರು ರಾಜು ಭಾಗವಹಿಸುವರು. ಹೆಚ್.ಎಲ್.ಯಮುನಾ ಆಶಯನುಡಿಗಳನ್ನಾಡುವರು,
ಇದೇ ಸಂದರ್ಭದಲ್ಲಿ ಹೆಚ್.ಎಂ.ಹರೀಶ್ ಹಾಗೂ ಹೆಚ್.ಎಸ್.ಅಭಿಲಾಷ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸುವರು, ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಮೈಸೂರು ಕೋ-ಅಪರೇಟಿವ ಬ್ಯಾಂಕ್ ನಿರ್ದೇಶಕ ಎಸ್.ಬಿ.ಎಂ.ಮಂಜು, ಟಿ.ಎನ್.ದಾಸೇಗೌಡ, ಮೈ.ಜಿ.ಟ್ರಾವೆಲ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಎ.ಸಿ.ರವಿ, ಹೆಚ್.ಎಸ್.ಲಕ್ಷ್ಮೇಗೌಡ, ಕೆ.ಆರ್.ಮಿಲ್ ಶಿವಣ್ಣ ಹಾಗೂ ಎಸ್.ವಿಜೇಂದ್ರ ಕಾರ್ಯಕ್ರಮದಲ್ಲಿ ಭಾಗಿಗಳಾಗುವರು. (ಕೆ.ಎಂ.ಆರ್)