ಕ್ರೀಡೆದೇಶಪ್ರಮುಖ ಸುದ್ದಿಮನರಂಜನೆ

‘ಮಹಾಭಾರತ’ದಲ್ಲಿ ‘ಭೀಮ’ನ ಪಾತ್ರಧಾರಿಯಾಗಿದ್ದ ನಟ ಪ್ರವೀಣ್ ಕುಮಾರ್ ಸೋಬತಿ ಇನ್ನಿಲ್ಲ

ದೇಶ(ಮುಂಬೈ),ಫೆ.8:- ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಸಾವಿನ ದುಃಖದಿಂದ ಇನ್ನೂ ಹೊರಬಂದಿಲ್ಲ. ಇದೀಗ ಬಿಆರ್ ಚೋಪ್ರಾ ನಿರ್ದೇಶನದ ಮಹಾಭಾರತದಲ್ಲಿ ಭೀಮನ ಪಾತ್ರ ಮಾಡಿದ್ದ ನಟ ಪ್ರವೀಣ್ ಕುಮಾರ್ ಸೋಬತಿ ನಿಧನರಾಗಿದ್ದಾರೆ.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಪ್ರವೀಣ್ ಕುಮಾರ್ ಸೋಬತಿ ಅವರು ದೀರ್ಘಕಾಲದಿಂದ ಅನಾರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಅವರು ತಮ್ಮ ಸದೃಢ ಮೈಕಟ್ಟಿನಿಂದ ಆಟಗಾರನ ರೂಪದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
ಪ್ರವೀಣ್ ಕುಮಾರ್ ಸೋಬತಿ ಅವರು ತಮ್ಮ ವೃತ್ತಿಜೀವನವನ್ನು ಆಟಗಾರನಾಗಿ ಪ್ರಾರಂಭಿಸಿದ ನಂತರ ಬಾಲಿವುಡ್‌ ನತ್ತ ಮುಖ ಮಾಡಿದರು. ಅವರು ಅನೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದರು, ಆದರೆ ಬಿಆರ್ ಚೋಪ್ರಾ ಅವರ ‘ಮಹಾಭಾರತ’ ಅವರಿಗೆ ಹೆಚ್ಚಿನ ಮನ್ನಣೆ ನೀಡಿತು. ಇದರಲ್ಲಿ ಅವರು ಭೀಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರ ಅವರನ್ನು ಮನೆ ಮನೆಗೂ ಕರೆದೊಯ್ದು ಫೇಮಸ್ ಮಾಡಿತು. ತಮ್ಮ ದೃಢಕಾಯ ಶರೀರದಿಂದಾಗಿ ಭೀಮನ ಪಾತ್ರದಲ್ಲಿ ಪ್ರವೀಣ್ ಕುಮಾರ್ ಸೋಬತಿ ಚೆನ್ನಾಗಿಯೇ ನಟಿಸಿದ್ದರು.
ಪ್ರವೀಣ್ ಕುಮಾರ್ ಸೋಬತಿ ತಮ್ಮ ನಟನಾ ವೃತ್ತಿಜೀವನದಲ್ಲಿ ಅಮಿತಾಭ್ ಬಚ್ಚನ್, ಜಿತೇಂದ್ರರಂತಹ ಸೂಪರ್‌ ಸ್ಟಾರ್‌ ಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು 1981 ರಲ್ಲಿ ‘ರಕ್ಷಾ’ ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ವರ್ಷ ಬಂದ ‘ಮೇರಿ ಆವಾಜ್ ಸುನೋ’ ಚಿತ್ರದಲ್ಲಿ ಪ್ರವೀಣ್ ಕುಮಾರ್ ಸೋಬ್ತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಅವರು ಜಿತೇಂದ್ರ ಅವರೊಂದಿಗೆ ಕೆಲಸ ಮಾಡಿದರು. ಅವರು ಅಮಿತಾಬ್ ಬಚ್ಚನ್ ಅವರ ಸೂಪರ್ ಹಿಟ್ ಚಿತ್ರ ‘ಶಾನ್ ಶಾಹ್’ ನಲ್ಲಿ ಕಾಣಿಸಿಕೊಂಡರು. ಇದಲ್ಲದೇ ಚಾಚಾ ಚೌಧರಿ ಧಾರಾವಾಹಿಯಲ್ಲಿ ಸಾಬು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರವೀಣ್ ಕುಮಾರ್ ಸೋಬತಿ ಓರ್ವ ನಟ ಮತ್ತು ಡಿಸ್ಕಸ್ ಥ್ರೋ ಕ್ರೀಡಾಪಟು. ಅವರು ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ (2 ಚಿನ್ನ, 1 ಬೆಳ್ಳಿ ಮತ್ತು 1 ಕಂಚು) ಪದಕ ವಿಜೇತರಾಗಿದ್ದಾರೆ. ಇದಲ್ಲದೆ, ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ (1968 ರಲ್ಲಿ ಮೆಕ್ಸಿಕೋ ಗೇಮ್ಸ್ ಮತ್ತು 1972 ರಲ್ಲಿ ಮ್ಯೂನಿಚ್ ಗೇಮ್ಸ್) ಭಾರತವನ್ನು ಪ್ರತಿನಿಧಿಸಿದ್ದರು. ಪ್ರವೀಣ್ ಕುಮಾರ್ ಸೋಬತಿ ಕೂಡ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿಎಸ್‌ಎಫ್‌ ನಲ್ಲಿ ಡೆಪ್ಯೂಟಿ ಕಮಾಂಡೆಂಟ್ ಹುದ್ದೆಯೂ ಸಿಕ್ಕಿತ್ತು. ಕ್ರೀಡೆಯಲ್ಲಿ ಯಶಸ್ವಿ ವೃತ್ತಿಜೀವನವನ್ನು ಮಾಡಿದ ನಂತರ, ಅವರು ಬಾಲಿವುಡ್ ಚಿತ್ರ ಜಗತ್ತನ್ನು ಪ್ರವೇಶಿಸಿದರು.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: