ಮೈಸೂರು

ಬಸವಣ್ಣ , ಡಾ. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಜಯಂತಿ : ಮೇ 10 ರಂದು ವಿಶೇಷ ಉಪನ್ಯಾಸ

ಮೈಸೂರು, ಮೇ 9 :- ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗದಿಂದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸವನ್ನು ಇದೇ ತಿಂಗಳ 10 ರಂದು ಬೆಳಿಗ್ಗೆ 10.30ಕ್ಕೆ ವಿವಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಕುಲಸಚಿವ ಪ್ರೊ.ಆರ್.ರಾಜಣ್ಣ ಹಾಗೂ ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಭಾಗವಹಿಸುವರು. ಇತಿಹಾಸ ಅಧ್ಯಯನ ವಿಭಾಗದ ಪ್ರೊ.ಕೆ.ಸದಾಶಿವ ಅಧ್ಯಕ್ಷತೆ ವಹಿಸುವರು. ಚಿಂತಕ ಆರ್.ಸದಾನಂದ ಅವರು “ಆಧುನಿಕ ಸವಾಲುಗಳು ಮತ್ತು ಬಸವಣ್ಣ” ಕುರಿತು, ಪ್ರೊ.ಬಿ.ಕೆ.ತುಳಸಿಮಾಲ ಅವರು ಸುಸ್ಥಿರ ಅಭಿವೃದ್ಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿಂತನೆಗಳ ಪ್ರಸ್ತುತತೆ ಬಗ್ಗೆ ಹಾಗೂ ವರ್ತಮಾನದಲ್ಲಿ ಬಾಬೂ ಜಗಜೀವನ್ ರಾಮ್ ಚಿಂತನೆಗಳು ಪ್ರಸ್ತುತತೆ ವಿಷಯವಾಗಿ ಡಾ.ಬಿ.ವಿ.ವಸಂತಕುಮಾರ್ ಅವರು ವಿಶೇಷ ಉಪನ್ಯಾಸಗಳನ್ನು ನೀಡುವರು.

 ವರದಿ: ಕೆ.ಎಂ.ಆರ್/ಎನ್.ಬಿ.ಎನ್

Leave a Reply

comments

Related Articles

error: