ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕಿರುತೆರೆಯ ಹರ್ಷ ಇದೀಗ ‘ಭರ್ಜರಿ ಗಂಡು’

ರಾಜ್ಯ(ಬೆಂಗಳೂರು),ಫೆ.9 :- ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಕಿರಣ್ ರಾಜ್ ಹಿರಿತೆರೆಯಲ್ಲಿ ಈಗಾಗಲೇ ಒಂದೆರೆಡು ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರಣ್ ಅಭಿನಯದ ಹೊಸ ಚಿತ್ರವೊಂದರ ಚಿತ್ರೀಕರಣ ಮುಗಿದು, ಬಿಡುಗಡೆ ಸಿದ್ಧತೆ ನಡೆಸಿದೆ. ಹೀಗಿರುವಾಗಲೇ, ಆ ಚಿತ್ರದ ಶೀರ್ಷಿಕೆ ಬದಲಾಗಿದೆ. ಈ ಮೊದಲು ‘ಬಹದ್ದೂರ್ ಗಂಡು’ ಎಂದೇ ಅಂತಿಮವಾಗಿದ್ದ ಶೀರ್ಷಿಕೆ, ಇದೀಗ ‘ಭರ್ಜರಿ ಗಂಡು’ ಎಂದು ಬದಲಾಗಿದೆ.

ನಿರ್ದೆಶಕ ಪ್ರಸಿದ್ಧ್ ಅವರ ನೇತೃತ್ವದ ಈ ಚಿತ್ರದಲ್ಲಿ ಕಿರಣ್ ರಾಜ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಲುವಾಗಿ ದೇಹವನ್ನು ಹುರಿಗೊಳಿಸಿರುವ ಕಿರಣ್, ದೊಣ್ಣೆ ವರಸೆ ಸಾಹಸದಲ್ಲಿ ಮಿಂಚಿದ್ದಾರೆ. ಪ್ರಸಿದ್ಧ್ ಜತೆಗೆ ಮದನ್ ಗೌಡ ಮತ್ತು ಅನಿಲ್ ಕುಮಾರ್ ಚಿತ್ರದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಕಿರಣ್ ಗೆ ಜೋಡಿಯಾಗಿ ಯಶಾ ಶಿವಕುಮಾರ್ ನಟಿಸಿದ್ದರೆ, ರಮೇಶ್ ಭಟ್, ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್ ಸೇರಿ ಹಲವರು ಚಿತ್ರದಲ್ಲಿದ್ದಾರೆ, ಗುಮ್ಮಿನೇನಿ ವಿಜಯ್ ಸಂಗೀತ ನೀಡಿದರೆ, ಕಿಟ್ಟಿ ಕೌಶಿಕ್ ಛಾಯಾಗ್ರಹಣ ನೀಡಿದ್ದು, ವೆಂಕಿ ಕತ್ತರಿ ಕೆಲಸವನ್ನು ಮಾಡಿದ್ದಾರೆ, ಹಾಗೆಯೇ ಮಳವಳ್ಳಿ ಸಾಯಿಕೃಷ್ಣ ಚಿತ್ರದ ಸಂಭಾಷಣೆಯನ್ನು ಬರೆದಿದ್ದಾರೆ.(ಎಸ್.ಎಂ)

Leave a Reply

comments

Related Articles

error: