
ಸುದ್ದಿ ಸಂಕ್ಷಿಪ್ತ
ಮೇ.15ಕ್ಕೆ ‘ಬಸವರಾಜ ಕುಕ್ಕರಹಳ್ಳಿ ಕಥಾಲೋಕ’ ಕೃತಿ ಲೋಕಾರ್ಪಣೆ
ಮೈಸೂರು.ಮೇ.9 : ಮೈಸೂರು ವಿವಿಯ ಕುವೆಂಪು ಅಧ್ಯಯನ ಸಂಸ್ಥೆ, ವಿಜಯಲಕ್ಷ್ಮಿ ಪ್ರಕಾಶನ ಹಾಗೂ ಬಳಗದಿಂದ ‘ಬಸವರಾಜ ಕುಕ್ಕರಹಳ್ಳಿ ಕಥಾಲೋಕ’ ಪುಸ್ತಕ ಲೋಕಾರ್ಪಣೆ ಹಾಗೂ ಕಥಾ ಸಂಭ್ರಮವನ್ನು ಮೇ.15ರಂದು ಬೆಳಿಗ್ಗೆ 11ಕ್ಕೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಸಾಹಿತಿ ಕುಂ.ವೀರಭದ್ರಪ್ಪ ಚಾಲನೆ ನೀಡುವರು, ಪುಸ್ತಕ ಕುರಿತು ವಿಮರ್ಶಕ ಹಾಗೂ ಅನುವಾದಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಮಾತನಾಡುವರು, ಮುಖ್ಯ ಅತಿಥಿಯಾಗಿ ಮೈಸೂರು ಆಕಾಶವಾಣಿ ಕಾರ್ಯನಿರ್ವಾಹಕ ಅಬ್ದುಲ್ ರಶೀದ್ ಭಾಗವಹಿಸುವರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರಕುಮಾರ್ ಅಧ್ಯಕ್ಷತೆ ವಹಿಸುವರು, ಬಸವರಾಜು ಕುಕ್ಕರಹಳ್ಳಿ, ಡಾ.ನೀಲಿಗಿರಿ ತಳವಾರ, ಡಾ.ಯೋಗೇಶ್.ಎನ್ ಹಾಗೂ ಭವಾನಿ ಸಂಜಯ್ ಉಪಸ್ಥಿತರಿರುವರು. (ಕೆ.ಎಂ.ಆರ್, ಎಸ್.ಎಚ್)