
ಮೈಸೂರು
ವಿದ್ಯುತ್ ಸೇವೆಗಳ ಅರಿವು ಸಪ್ತಾಹ ಕಾರ್ಯಕ್ರಮ
ಮೈಸೂರು,ಫೆ.10:- ವಿದ್ಯುತ್ ಸೇವೆಗಳ ಅರಿವು ಸಪ್ತಾಹ ಕಾರ್ಯಕ್ರಮವನ್ನು ತಿ.ನರಸೀಪುರ ತಾಲೂಕಿನಲ್ಲಿ ತಿ.ನರಸೀಪುರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹರ್ಷನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ವಿದ್ಯುತ್ ಕ್ಷೇತ್ರದಲ್ಲಿ ನಿಯತ ವಿದ್ಯುತ್ ಜಾಲದ ತಾಂತ್ರಿಕ ವಿಸ್ತರಣೆ ಮಾಡಲಾಗುವುದು. ವಿಶ್ವಾಸನೀಯ ಹಾಗೂ ಉತ್ತಮ ಗುಣಮಟ್ಟದ ವಿದ್ಯುತ್ ಸೇವೆ ನೀಡಲಾಗುವುದು. ವಿದ್ಯುತ್ ಇಲಾಖೆಯ ಅನೇಕ ಯೋಜನೆಗಳನ್ನ ರೈತರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು. ಸಾರ್ವಜನಿಕರು ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಚೆಸ್ಕಾಂ ಅಧಿಕಾರಿಗಳಾದ ವಿಜಯ್ ಕುಮಾರ್,ಅನಿತಾ,ಮಹಮ್ಮದ್ ಸಲಾವುದ್ದಿನ್, ಸೇರಿದಂತೆ ರೈತರು ಹಾಗೂ ಸಾರ್ವಜನಿಕರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)