
ಮೈಸೂರು
ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ಎಸ್ ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳ ಸಾಧನೆ
ಮೈಸೂರು,ಫೆ.16:- ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್ ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ವಿಶ್ವಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಬಿ.ಎಸ್. ಜ್ಞಾನೇಶ್ ಕುಮಾರ್ ಮತ್ತು ಸಿ.ಎ. ಪವನ್ ಇವರು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ ನಡೆಸಿದ ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಇವರಿಬ್ಬರು ಕೂಡ ಕಾಲೇಜಿನಲ್ಲಿ ನೀಡುವ ಸಿ.ಎ. ಫೌಂಡೇಷನ್ ಕೋಚಿಂಗ್ ನ ವಿದ್ಯಾರ್ಥಿಗಳಾಗಿದ್ದರು. ಎಸ್ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲರವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ನಮ್ಮ ಸಂಸ್ಥೆಯಲ್ಲಿ ಒದಗಿಸಿರುವ ಸಿಎ-ಸಿಪಿಟಿ ಸಿಎಸ್ ಕೋಚಿಂಗ್ ನ್ನು ಇವರಿಬ್ಬರು ವಿದ್ಯಾರ್ಥಿಗಳು ಸರಿಯಾಗಿ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆಗೈದಿರುತ್ತಾರೆ. ಒಂದು ಸ್ಪಷ್ಟವಾದ ಗುರಿ ಇಟ್ಟುಕೊಂಡು ಛಲದಿಂದ ಅಧ್ಯಯನ ಮಾಡಿದರೆ ಸಾಧನೆಯ ಉತ್ತುಂಗಕ್ಕೆ ಪ್ರತಿಯೊಬ್ಬರು ಏರಬಹುದು ಎಂಬುದಕ್ಕೆ ಈ ವಿದ್ಯಾಥಿಗಳೇ ಸಾಕ್ಷಿ ಎಂದು ಹೇಳಿದರು.
ಸಂಸ್ಥೆಯ ಸಿಎ-ಸಿಪಿಟಿ ಸಿಎಸ್ ಕೋಚಿಂಗ್ ನ್ನು ನಮ್ಮಲ್ಲಿನ ಸಿಎ ತರಬೇತುದಾರರೊಂದಿಗೆ, ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಿಎ ತರಬೇತುದಾರರನ್ನು ಮತ್ತು ಈಗಾಗಲೇ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರನ್ನು ಕರೆಸಿ ಅವರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇದರ ಉಪಯೋಗವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಹೇಳಿದರು. ಈ ಸಂದರ್ಭ ಕಾಲೇಜಿನಲ್ಲಿ ಆಡಳಿತಾಧಿಕಾರಿ ಡಾ. ಕೆಂಪೇಗೌಡ, ಪ್ರಾಂಶುಪಾಲರಾದ ರಚನ್ ಅಪ್ಪಣಮಯ್ಯ ಮತ್ತು ಅಧ್ಯಾಪಕರುಗಳು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. (ಜಿ.ಕೆ,ಎಸ್.ಎಚ್)